ಭಾರತಕ್ಕೆ ಬಂದ ಅಬುಧಾಬಿ ಯುವರಾಜನನ್ನು ಸ್ವಾಗತಿಸಿದ ಪ್ರಧಾನಿ ಮೋದಿ

ಅಬುಧಾಬಿಯ ಯುವರಾಜ ಹಾಗೂ ಸಂಯುಕ್ತ ಅರಬ್ ಗಣರಾಜ್ಯದ ಸಶಸ್ತ್ರ ಪಡೆಗಳ ಉಪ ಸರ್ವೋಚ್ಛ ದಂಡನಾಯಕ ಜನರಲ್ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು ಭಾರತಕ್ಕೆ ಮೂರು ದಿನಗಳ ಭೇಟಿಗೆ ಆಗಮಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು...
ಭಾರತಕ್ಕೆ ಬಂದ ಅಬುಧಾಬಿ ಯುವರಾಜನನ್ನು ಸ್ವಾಗತಿಸಿದ ಪ್ರಧಾನಿ ಮೋದಿ
ಭಾರತಕ್ಕೆ ಬಂದ ಅಬುಧಾಬಿ ಯುವರಾಜನನ್ನು ಸ್ವಾಗತಿಸಿದ ಪ್ರಧಾನಿ ಮೋದಿ

ನವದೆಹಲಿ: ಅಬುಧಾಬಿಯ ಯುವರಾಜ ಹಾಗೂ ಸಂಯುಕ್ತ ಅರಬ್ ಗಣರಾಜ್ಯದ ಸಶಸ್ತ್ರ ಪಡೆಗಳ ಉಪ ಸರ್ವೋಚ್ಛ ದಂಡನಾಯಕ ಜನರಲ್ ಶೇಖ್ ಮುಹಮ್ಮದ್ ಬಿನ್ ಝಾಯೆದ್  ಅಲ್ ನಹ್ಯಾನ್ ಅವರು ಭಾರತಕ್ಕೆ ಮೂರು ದಿನಗಳ ಭೇಟಿಗೆ ಆಗಮಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವರನ್ನು ಗುರುವಾರ ಸ್ವಾಗತಿಸಿದ್ದಾರೆ.

ಪಾಲಂ ತಾಂತ್ರಿಕ ಪ್ರದೇಶದಲ್ಲಿ ವಿಮಾನದಿಂದ ಇಳಿದ ಯುವರಾಜನನ್ನು ಪ್ರಧಾನಮಂತ್ರಿ ಮೋದಿಯವರು ತಮ್ಮ ಬಿಗಿ ಅಫ್ಪುಗೆಯ ಮೂಲಕ ಸ್ವಾಗತಿಸಿದರು. ಯುವರಾಜನನ್ನು ಸ್ವಾಗತಿಸುವ ವೇಳೆ ಗೃಹ ಸಚಿವ ರಾಜನಾಥ ಸಿಂಗ್ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹಾಜರಿದ್ದರು. ಸ್ವಾಗತ ಕಾರ್ಯಕ್ರಮಕ್ಕೆ ಹಾಜರಾಗುವುದಕ್ಕೂ ಮುನ್ನ ರಾಜ್ ಘಾಟ್ ಗೆ ಭೇಟಿ ನೀಡಿದ ಅವರು ಮಹಾತ್ಮಗಾಂಧಿಯವರ ಸ್ಮಾರಕಕ್ಕೆ ನಮನ ಸಲ್ಲಿಸಿದರು.

ಮೂರು ದಿನಗಳ ಪ್ರವಾಸದಲ್ಲಿ ಇಬ್ಬರು ನಾಯಕರು ಪ್ರಮುಖ ವಿಷಯಗಳ ಕುರಿತಂತೆ ಚರ್ಚೆ ನಡೆಸಲಿದ್ದು, ಉಗ್ರರ ನಿಗ್ರಹ (ಇಸಿಸ್), ರಕ್ಷಣಾ ಸಲಕರಣೆಗಳ ಉತ್ಪಾದನೆ, ನಾಗರಿಕ ಅಣು ಸಹಕಾರ ಹಾಗೂ ಇನ್ನಿತರೆ ಹಲವು ಒಪ್ಪಂದಗಳಿಗೆ ಭಾರತ ಮತ್ತು ಯುಎಇ ಸಹಿ ಮಾಡಲಿವೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com