ನವದೆಹಲಿ: ನೋಯಿಡಾ ಮೂಲದ ರಿಂಗಿಂಗ್ ಬೆಲ್ ಕಂಪನಿಯ ರು.251 ಬೆಲೆಯ ಸ್ಮಾರ್ಟ್ ಫೋನ್ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ತಯಾರಿಕೆ ಮತ್ತು ಮಾರಾಟ ಹೇಗೆ ಸಾಧ್ಯ ಎಂಬುದುರ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಆದೇಶಿಸಿದ್ದು, ದೂರಸಂಪರ್ಕ ಇಲಾಖೆ ತನಿಖೆ ನಡೆಸಿ ವರದಿ ಸಲ್ಲಿಸಲಿದೆ.
ಅತ್ಯಂತ ಕಡಿಮೆ ಬೆಲೆಗೆ ಮೊಬೈಲ್ ಮಾರಾಟ ಮಾಡುವುದನ್ನು ತಡೆಯಬೇಕು ಎಂದು ಕೋರಿ ಭಾರತೀಯ ಮೊಬೈಲ್ ತಯಾರಕರ ಸಂಘ(ಐಸಿಎ) ದೂರಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ದೂರು ಸಲ್ಲಿಸಿತ್ತು. ಈ ಹಿನ್ನಲೆಯಲ್ಲಿ ಸಚಿವರು, ತನಿಕೆ ನಡೆಸಿ ವರದಿ ನೀಡುವಂತೆ ದೂರಸಂಪರ್ಕ ಇಲಾಖೆಗೆ ಸೂಚಿಸಿದ್ದಾರೆ.
"ಫ್ರೀಡಂ 251'ರ ಸ್ಮಾರ್ಟ್ ಫೋನ್ ಗಾಗಿ ಗ್ರಾಹಕರು ಮುಗಿ ಬಿದ್ದ ಹಿನ್ನಲೆಯಲ್ಲಿ ವೆಬ್ ಸೈಟ್ ಸ್ಥಗಿತಗೊಂಡಿದ್ದು, ತಾತ್ಕಾಲಿಕವಾಗಿ ಬುಕ್ಕಿಂಗ್ ಪ್ರಕ್ರಿಯೆ ನಿಲ್ಲಿಸಲಾಗಿದೆ.