ಆಗ್ನೇಯ ಏಷ್ಯಾದತ್ತ ಓಯೋ ರೂಮ್ಸ್

ಸಾಧಾರಣ ದರಗಳ ಹೋಟೆಲ್ ಸರಪಣಿ ಓಯೋ ರೂಮ್ಸ್ ಆಗ್ನೇಯ ಏಷ್ಯಾ ದೇಶಗಳಿಗೆ ವಹಿವಾಟು ವಿಸ್ತರಿಸುವತ್ತ ನೋಟ ಹರಿಸಿದೆ. ಇದರ ಭಾಗವಾಗಿ ಕಂಪನಿ...
ಓಯೋ ರೂಮ್ಸ್
ಓಯೋ ರೂಮ್ಸ್

ನವದೆಹಲಿ: ಸಾಧಾರಣ ದರಗಳ ಹೋಟೆಲ್ ಸರಪಣಿ ಓಯೋ ರೂಮ್ಸ್ ಆಗ್ನೇಯ ಏಷ್ಯಾ ದೇಶಗಳಿಗೆ ವಹಿವಾಟು ವಿಸ್ತರಿಸುವತ್ತ ನೋಟ ಹರಿಸಿದೆ. ಇದರ ಭಾಗವಾಗಿ ಕಂಪನಿ ಮಲೇಷ್ಯಾದಲ್ಲಿ ಮೊದಲಿಗೆ ಕಾರ್ಯಾಚರಣೆ ಆರಂಭಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಹಿವಾಟು ವಿಸ್ತರಿಸುವುದು ಕಂಪನಿಯ ಯೋಜನೆಯಲ್ಲಿದೆ. ಅದಕ್ಕೂ ಮೊದಲು ದೇಶೀಯ ಮಾರುಕಟ್ಟೆಯಲ್ಲಿ ವಹಿವಾಟನ್ನು ಇನ್ನಷ್ಟು ಗಟ್ಟಿಗೊಳಿಸಲಾಗುವುದು ಎಂದು ಕಂಪನಿ ಸಂಸ್ಥಾಪಕ ಮತ್ತು ಸಿಇಒ ರಿತೇಶ್ ಅಗರ್ ವಾಲ್ ಹೇಳಿದ್ದಾರೆ. ಬ್ರಾಂಡೇತರ ಹೋಟೆಲ್‍ಗಳು ಹೆಚ್ಚಾಗಿರುವ ದಕ್ಷಿಣ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಂತಹ ಮಾರುಕಟ್ಟೆಗಳಿಗೆ ಓಯೊ ಸೂಕ್ತವಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com