ಷೇರುಪೇಟೆ ಕುಸಿತಕ್ಕೆ ಪ್ರಮುಖ ಕಾರಣಗಳು

ದೇಶೀಯ ಮಾರುಕಟ್ಟೆ ಸೂಚ್ಯಂಕಗಳ ಕುಸಿತ ಮುಂದುವರೆದಿದ್ದು, ಬುಧವಾರ ಮತ್ತೆ ಪಾತಾಳಕ್ಕೆ ಕುಸಿದಿದೆ. ಬುಧವಾರ ನಡೆದ ವಹಿವಾಟಿನಲ್ಲಿ ಸೆನ್ಸೆಕ್ಸ್ 417.80 ಅಂಕ ಕಳೆದುಕೊಂಡಿದ್ದು, ಷೇರುಪೇಟೆ ಕುಸಿತಕ್ಕೆ ಹಲವು ಪ್ರಮುಖ ಕಾರಣಗಳಿವೆ...
ಸೆನ್ಸೆಕ್ಸ್ (ಸಂಗ್ರಹ ಚಿತ್ರ)
ಸೆನ್ಸೆಕ್ಸ್ (ಸಂಗ್ರಹ ಚಿತ್ರ)

ಮುಂಬೈ: ದೇಶೀಯ ಮಾರುಕಟ್ಟೆ ಸೂಚ್ಯಂಕಗಳ ಕುಸಿತ ಮುಂದುವರೆದಿದ್ದು, ಬುಧವಾರ ಮತ್ತೆ ಪಾತಾಳಕ್ಕೆ ಕುಸಿದಿದೆ. ಬುಧವಾರ ನಡೆದ ವಹಿವಾಟಿನಲ್ಲಿ ಸೆನ್ಸೆಕ್ಸ್ 417.80 ಅಂಕ ಕಳೆದುಕೊಂಡಿದ್ದು, ಷೇರುಪೇಟೆ ಕುಸಿತಕ್ಕೆ ಹಲವು ಪ್ರಮುಖ ಕಾರಣಗಳಿವೆ.

1. ಇಳಿದ ಕಚ್ಚಾ ತೈಲ:
ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾತೈಲ ದಾಸ್ತಾನು ಬರಲಿದೆ ಎಂದು ಸಂಶೋಧನಾ ವರದಿ ಪ್ರಕಟವಾದ ಹಿನ್ನಲೆಯಲ್ಲಿ ದರಗಳು ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಾ  ಸಾಗಿವೆ. ಬ್ರೆಂಟ್ ಕ್ರೂಡ್ ಪ್ರತಿ ಬ್ಯಾರಲ್ ದರ 28.21 ಡಾಲರ್ ಆಸುಪಾಸಿನಲ್ಲಿ ವಹಿವಾಟು ಕಾಣುತ್ತಿದೆ.

2.ಅಮೆರಿಕ ಆರ್ಥಿಕತೆಯ ಹಿನ್ನಡೆ:
ಡೌಜೋನ್ಸ್ ಕೈಗಾರಿಕಾ ಸರಾಸರಿ ಸೂಚ್ಯಂಕ ಶೇ.2.23ರಷ್ಟು ಕುಸಿದಿದೆ. 2008ರ ನಂತರ ಇದು ಗರಿಷ್ಠ ಹಿನ್ನಡೆಯಾಗಿದೆ. 2008ರ ನಂತರ ಇದು ಗರಿಷ್ಠ ಹಿನ್ನಡೆಯಾಗಿದೆ. 2016ರಲ್ಲಿ ಇದುವರೆಗೂ  ಶೇ.8ಕ್ಕಿಂತಲೂ ಹೆಚ್ಚು ಕುಸಿದಿದೆ. ಎಚ್ಚರಿಕೆ ವಹಿಸಲು ಆರ್ಥಿಕ ವಿಶ್ಲೇಷಕರು ಸೂಚನೆ ನೀಡಿದ್ದಾರೆ.

3.ರುಪಾಯಿ ಅಪಮೌಲ್ಯ:
ಎಫ್ ಐಐಗಳು ಷೇರುಪೇಟೆಯಲ್ಲಿ ಹೂಡಿಕೆ ಹಿಂಪಡೆಯುತ್ತಿರುವುದರಿಂದ ರುಪಾಯಿ ಮೌಲ್ಯದಲ್ಲಿ ಕುಸಿತ ಕಾಣುತ್ತಿದೆ. 2013ರ ಸೆಪ್ಟೆಂಬರ್ 4ರಂ ನಂತರ ರುಪಾಯಿ ಮೌಲ್ಯ ಕನಿಷ್ಠ ಹಂತಕ್ಕೆ  ಬಂದು ತಲುಪಿದೆ.

4.ಜಾಗತಿಕ ಆರ್ಥಿಕ ಹಿಂಜರಿತ:
ಪ್ರಸಕ್ತ ವರ್ಷ ಜಾಗತಿಕ ಆರ್ಥಿಕ ಪ್ರಗತಿ ಕುಸಿಯಲಿದೆ ಎಂದು ಐಎಂಎಫ್ ಮಂಗಳವಾರ ಹೇಳಿತ್ತು. ಇದು ಜಗತ್ತಿನಾದ್ಯಂತ ಎಲ್ಲ ಷೇರುಪೇಟೆಗಳ ಮೇಲೆ ಪರಿಣಾಮ ಬೀರಿತು.

5.ಚೀನಾ ಜಿಡಿಪಿ ಕುಸಿತ:
ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಚೀನಾ ಜಿಡಿಪಿ ಶೇ.6.8ಕ್ಕೆ ಕುಸಿದಿದೆ. ಇದು ಕಳೆದ 254 ವರ್ಷಗಳಲ್ಲೇ ಕನಿಷ್ಠ ಮಟಚ್ಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com