ಬೆಂಗಳೂರಿಗೆ ಬಂಪರ್ ಬಂಡವಾಳ?
ಬೆಂಗಳೂರು: ಇನ್ವೆಸ್ಟ್ ಕರ್ನಾಟಕ 2016, ವಿಶ್ವ ಹೂಡಿಕೆದಾರರ ಸಮಾವೇಶ ಬೆಂಗಳೂರು ನಗರದ ಅಭಿವೃದ್ಧಿಯ ಸುವರ್ಣಯುಗಕ್ಕೆ ನಾಂದಿ ಹಾಡಲಿದೆಯೇ? ಹೌದು ಎನ್ನುತ್ತಿದೆ ಸರ್ಕಾರ, ಕಾರಣ ಈ ಬಾರಿ ಇನ್ವೆಸ್ಟ್ ಕರ್ನಾಟಕದ ಮೂಲಕ ಬೆಂಗಳೂರನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸುವ ಜತೆಗೆ, ಸಾರ್ವಜನಿಕರ ನಿತ್ಯದ ಸಮಸ್ಯೆಗಳನ್ನು ಪರಿಹರಿಸಲು ವಿದೇಶಿ ಹೂಡಿಕೆದಾರರು ನೆರವಾಗುವ ಎಲ್ಲ ನಿರೀಕ್ಷೆಗಳಿವೆ.
ಬೆಂಗಳೂರಿನ ಮನೆ ಮನೆಗೂ ಪೈಪ್ ಲೈನ್ ಮೂಲಕ ಹರಿದು ಬರಲಿದೆ ಗ್ಯಾಸ್...ವಾಹನಗಳಿಗೂ ಸಿಎನ್ ಜಿ ಗ್ಯಾಸ್ ಫಿಲ್ ಮಾಡಲು ಪೈಪ್ ಲೈನ್...ಟ್ರಾಫಿಕ್ ಕಿರಿ ಕಿರಿ ತಪ್ಪಿಸಲು ನಗರದ ನಾಲ್ಕೂ ದಿಕ್ಕುಗಳಲ್ಲಿ ಎಲಿವೇಟೆಡ್ ಕಾರಿಡಾರ್, ಲೈಟ್ ರೈಲ್ ಟ್ರಾನ್ಸಿಟ್ (ಲಘು ರೈಲು ಸಂಚಾರ) ವ್ಯವಸ್ಥೆ, ಕಲಾ ಗ್ರಾಮದಲ್ಲಿ ರಾಜ್ಯದ ವಿವಿಧೆಡೆಯ ಕಲಾ ಕುಸುರಿ ವಸ್ತುಗಳ ಖರೀದಿ...ಡಿಸ್ನಿ ಲ್ಯಾಂಡ್, ' ಬೆಂಗಳೂರು ಔ ನಲ್ಲಿ ವಿಹಾರ ಹಲಸೂರು ಕೆರೆಯಲ್ಲಿ ಕ್ರೂಸಿಂಗ್ ಜತೆ ರಾತ್ರಿಯೂಟ...ಹೀಗೆ ಒಂದೇ ಎರಡೇ ಹತ್ತಾರು ಸೌಕರ್ಯಗಳಿಗಾಗಿ ಖಾಸಗಿ ಸಹಭಾಗಿತ್ವವವನ್ನು ಈ ಬಾರಿಯ ಇನ್ವೆಸ್ಟ್ ಕರ್ನಾಟಕ ಎದುರು ನೋಡುತ್ತಿದ್ದು, ಬೆಂಗಳೂರು ಹೂಡಿಕೆ ಧಮಾಕಾದ ನಿರೀಕ್ಷೆಯಲ್ಲಿದೆ.
ಸಂಚಾರದ ಜತೆಗೆ ಸಾರ್ವಜನಿಕ ಸೌಲಭ್ಯ ರಂಗದಲ್ಲಿ ಹೂಡಿಕೆಗೆ ಒತ್ತು ನೀಡಲಿರುವ 145 ಕ್ಷೇತ್ರಗಳನ್ನು ಈ ಬಾರಿಯ ಇನ್ವೆಸ್ಟ್ ಕರ್ನಾಟಕ ಗುರುತಿಸಿದ್ದು, ಇವುಗಳಲ್ಲಿ ಬೆಂಗಳೂರು ನಗರದಲ್ಲಿ ಹೂಡಿಕೆದಾರರಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ರು.10,875 ಕೋಟಿ ಮೊತ್ತದ ಲೈಟ್ ರೈಲ್ ಟ್ರಾನ್ಸಿಟ್ ವ್ಯವಸ್ಥೆಯಿಂದ ಹಿಡಿದು ನಾಲ್ಕು ಕೋಟಿ ವೆಚ್ಚದ ಕಲಾಗ್ರಾಮ ರು.2.3 ಕೋಟಿ ವೆಚ್ಚದ ಪೂರ್ವ-ಪಶ್ಚಿಮ ಕಾರಿಡಾರ್ ನಿರ್ಮಾಣದವರೆಗೆ ಸಣ್ಣ ಮತ್ತು ಅತಿ ದೊಡ್ಡ ಹೂಡಿಕೆದಾರರಿಗೆ ಇನ್ವೆಸ್ಟ್ ಕರ್ನಾಟಕ ಬಾಗಿಲು ತೆರೆದಿದೆ.
ಇನ್ವೆಸ್ಟ್ ಕರ್ನಾಟಕ ಆ್ಯಪ್ ಬಿಡುಗಡೆ
ಫೆ.3 ರಿಂದ 5ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶದ ಕುರಿತ ಎಲ್ಲ ಮಾಹಿತಿಗಳನ್ನು ಪಡೆಯಲು ಹಾಗೂ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಅನುವಾಗುವಂತೆ ಇನ್ವೆಸ್ಟ್ ಕರ್ನಾಟಕ 2016 ಆ್ಯಪ್ ಅನ್ನು ಶನಿವಾರ ಬಿಡುಗಡೆಗೊಳಿಸಲಾಯಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ