ಭಾರತ ಮಾರುಕಟ್ಟೆಯಲ್ಲಿ ಪಾರುಪತ್ಯ ಮೆರೆಯಲು ನೋಕಿಯಾ ಸಿದ್ಧತೆ

ಮೊಬೈಲ್ ಲೋಕದಲ್ಲಿ ದಶಕಗಳ ಕಾಲ ಪಾರುಪತ್ಯ ಮೆರೆದ ನೋಕಿಯಾ ಮೊಬೈಲ್ ಕಂಪನಿ ಇದೀಗ ಅಂಡ್ರಾಯ್ಡ್ ಮಾದರಿಯ ಮೊಬೈಲ್ ಗಳ ಮೂಲಕ ಮತ್ತೆ...
ನೋಕಿಯಾ
ನೋಕಿಯಾ

ನವದೆಹಲಿ: ಮೊಬೈಲ್ ಲೋಕದಲ್ಲಿ ದಶಕಗಳ ಕಾಲ ಪಾರುಪತ್ಯ ಮೆರೆದ ನೋಕಿಯಾ ಮೊಬೈಲ್ ಕಂಪನಿ ಇದೀಗ ಅಂಡ್ರಾಯ್ಡ್ ಮಾದರಿಯ ಮೊಬೈಲ್ ಗಳ ಮೂಲಕ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡಲು ಮುಂದಾಗಿದೆ.

ವಿಂಡೋಸ್ ಮಾದರಿಯ ಮೊಬೈಲ್ ಗಳ ಮೂಲಕ ಯಶಸ್ಸು ಸಾಧಿಸದ ನೋಕಿಯಾ ಕಂಪನಿ ಇದೀಗ ನೋಕಿಯಾ ಪಿ1 ಹೆಸರಿನ ಅಂಡ್ರಾಯ್ಡ್ ಮೊಬೈಲ್ ಮೂಲಕ ಬ್ರ್ಯಾಂಡ್ ಮೌಲ್ಯವನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ನೋಕಿಯಾ ಮೊದಲ ಹೆಜ್ಜೆ ಇಟ್ಟಿದೆ.

ಕಳೆದ ಎರಡು ವರ್ಷದಿಂದ ನೋಕಿಯಾದ ಯಾವುದೇ ಸ್ಮಾರ್ಟ್ ಫೋನ್ ಉತ್ಪನ್ನ ತಯಾರಿಕೆಗೆ ಮುಂದಾಗಿರಲಿಲ್ಲ. 2016ರಲ್ಲೆ ಮೊಬೈಲ್ ನಿಮ್ಮ ಕೈ ಸೇರಲಿದೆ ಎಂದು ಕಂಪನಿಯ ಸಿಇಓ ರಾಜೀವ್ ಸೂರಿ ತಿಳಿಸಿದ್ದಾರೆ.

ನಷ್ಟದ ಸುಳಿಯಲ್ಲಿದ್ದ ನೋಕಿಯಾವನ್ನು ಮೈಕ್ರೋಸಾಫ್ಟ್ 4.6 ಬಿಲಿಯನ್(460 ಕೋಟಿ) ಡಾಲರ್ ಗಳಿಗೆ ಖರೀದಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com