1 ಬಿಲಿಯನ್ ದಾಟಿದ ಫೇಸ್ ಬುಕ್ ಬಳಕೆದಾರರ ಸಂಖ್ಯೆ, ಆದಾಯ ಕೂಡ ಗಣನೀಯ ಹೆಚ್ಚಳ

ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಬಳಕೆದಾರರ ಸಂಖ್ಯೆ 1 ಬಿಲಿಯನ್ ದಾಟಿದ್ದು, ಅದರ ಆದಾಯ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಫೇಸ್ ಬುಕ್ (ಸಂಗ್ರಹ ಚಿತ್ರ)
ಫೇಸ್ ಬುಕ್ (ಸಂಗ್ರಹ ಚಿತ್ರ)

ನ್ಯೂಯಾರ್ಕ್: ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಬಳಕೆದಾರರ ಸಂಖ್ಯೆ 1 ಬಿಲಿಯನ್ ದಾಟಿದ್ದು, ಅದರ ಆದಾಯ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು  ತಿಳಿದುಬಂದಿದೆ.

2016ನೇ ಸಾಲಿನ 2ನೇ ತ್ರೈಮಾಸಿಕ ವರದಿಯನ್ವಯ ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ನ ಮಾಸಿಕ ಬಳಕೆದಾರರ ಸಂಖ್ಯೆ 60 ಮಿಲಿಯನ್ ಗೇರಿದ್ದು, 1.71 ಬಿಲಿಯನ್ ಬಳಕೆದಾರರ  ಮೂಲಕ ಅದರ ಆದಾಯ 6.44 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಈ ಹಿಂದಿನ ಅಂದಾಜಿನಂತೆ 2ನೇ ತ್ರೈಮಾಸಿಕ ವೇಳೆಗೆ ಫೇಸ್ ಬುಕ್ ನ ಆದಾಯ 6.02 ಬಿಲಿಟನ್ ಡಾಲರ್ ಗೆ  ಏರಿಕೆಯಾಗಬಹುದು ಎಂದು ಆಂದಾಜಿಸಲಾಗಿತ್ತು. ಆದರೆ ನಿರೀಕ್ಷೆ ಮೀರಿ ಫೇಸ್ ಬುಕ್ ಆದಾಯ ಹೆಚ್ಚಳವಾಗಿರುವುದು ಸಂಸ್ಥೆಯ ಸಿಬ್ಬಂದಿಗಳಲ್ಲಿ ಸಂತಸ ತಂದಿದೆ.

ಮೂಲಗಳ ಪ್ರಕಾರ ಫೇಸ್ ಬುಕ್ ಬಳಕೆದಾರರ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ಶೇ.17ರಷ್ಟು ಏರಿಕೆಯಾಗುತ್ತಿದ್ದು, ಪ್ರತಿನಿತ್ಯ ಸುಮಾರು 1.13 ಬಿಲಿಯನ್ ಗೇರಿದೆ. ಅಂತೆಯೇ ಫೇಸ್ ಬುಕ್  ಜಾಹಿರಾತು ಪ್ರಮಾಣ ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಶೇ.84ರಷ್ಟು ಆದಾಯ ಜಾಹಿರಾತು ವಿಭಾಗದಿಂದಲೇ ಬಂದದ್ದಾಗಿದೆ. ಅದರಂತೆ ಒಟ್ಟಾರೆ ಆದಾಯದಲ್ಲಿ 6.2 ಬಿಲಿಯನ್  ಡಾಲರ್ ಹಣ ಈ ವಿಭಾಗದಿಂದ ಹರಿದುಬಂದಿದೆ ಎಂದು ತಿಳಿದುಬಂದಿದೆ.

ಈ ವರದಿ ಹೊರ ಬೀಳುತ್ತಿದ್ದಂತೆಯೇ ಫೇಸ್ ಬುಕ್ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದ್ದು, ಪ್ರತೀ ಷೇರಿನ ಮೇಲೆ ಶೇ.7.5ರಷ್ಟು ಮೌಲ್ಯ ಏರಿಕೆ ಕಂಡುಬಂದಿದೆ. ಪ್ರಸ್ತುತ ಫೇಸ್ ಬುಕ್  ಪ್ರತೀ ಷೇರುಗಳು 132 ಡಾಲರ್ ಗಳಿಗೆ ಮಾರಾಟವಾಗುತ್ತಿದೆ ಎಂದು ತಿಳಿದುಬಂದಿದೆ. ಅದೇ ತಿಂಗಳ ಮೊಬೈಲ್ ಫೇಸ್ ಬುಕ್ ಬಳಕೆದಾರರ ಸಂಖ್ಯೆ ಕೂಡ ಶೇ.22ರಷ್ಟು ಏರಿಕೆಯಾಗಿದ್ದು,  ಮೊಬೈಲ್ ನಲ್ಲಿ ಫೇಸ್ ಬುಕ್ ಬಳಕೆದಾರರ ಸಂಖ್ಯೆ 1.03 ಬಿಲಿಯನ್ ಗೇರಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರು, ಜನ ವಿವಿಧ ವಿಷಯಗಳ ಬಗ್ಗೆ ಇತರರು ಏನು ಹೇಳುತ್ತಿದ್ದಾರೆ ಎಂಬ ವಿಚಾರದ ಕುರಿತು  ತೀವ್ರ ಕುತೂಹಲದಿಂದಿರುತ್ತಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com