ಯಾಹೂ ಜೊತೆಗೆ ವೀಲೀನಕ್ಕೆ ಟ್ವಿಟ್ಟರ್ ಮಾತುಕತೆ: ವರದಿ

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಸಂಸ್ಥೆಯ ಅಧಿಕಾರಿಗಳು ಯಾಹೂ ಸಂಸ್ಥೆಯ ಸಿಇಒ ಮರಿಸ್ಸಾ ಮಾಯೇರ್ ಅವರನ್ನು ಭೇಟಿ ಮಾಡಿ ವಿಲೀನ ಸಾಧ್ಯತೆಯ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯವೊಂದು ವರದಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನ್ಯೂಯಾರ್ಕ್: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಸಂಸ್ಥೆಯ ಅಧಿಕಾರಿಗಳು ಯಾಹೂ ಸಂಸ್ಥೆಯ ಸಿಇಒ ಮರಿಸ್ಸಾ ಮಾಯೇರ್ ಅವರನ್ನು ಭೇಟಿ ಮಾಡಿ ವಿಲೀನ ಸಾಧ್ಯತೆಯ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯವೊಂದು ವರದಿ ಮಾಡಿದೆ.

ಈ ಆಡಳಿತಮಂಡಲಿಯ ಸಭೆಯಲ್ಲಿ, ಟ್ವಿಟ್ಟರ್ ಮತ್ತು ಯಾಹೂ ಸಂಸ್ಥೆಯ ಕಾರ್ಯಕಾರಿ ಅಧಿಕಾರಿಗಳು ಈ ವಿಲೀನದ ಸಾಧ್ಯತೆಗಳನ್ನು ಚರ್ಚಿಸಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ಶುಕ್ರವಾರ ವರದಿ ಮಾಡಿದೆ.

"ತಕ್ಷಣದ ಸುದ್ದಿಗೆ ಟ್ವಿಟ್ಟರ್ ನೆಚ್ಚಿನ ತಾಣವಾಗಿ ಬೆಳೆದಿದೆ ಮತ್ತು ಯಾಹೂ ಈ ತಾಣದ ಮೇಲೆ ಕಣ್ಣಿಟ್ಟಿದೆ. ಈ ವಿಲೀನ ಯೋಜನೆ ಸಾಧ್ಯವಿಲ್ಲ ಎಂದೇನಿಲ್ಲ" ಎಂದು ಮೂಲಗಳು ತಿಳಿಸಿವೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟ್ವಿಟ್ಟರ್ ವಕ್ತಾರ ಮಾರುಕಟ್ಟೆಯ ವದಂತಿಗಳಿಗೆ ಟ್ವಿಟ್ಟರ್ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ ಮತ್ತು ಯಾಹೂ ಅಧಿಕಾರಿಗಳು ಕೂಡ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com