ಹಣದುಬ್ಬರ ಧನಾತ್ಮಕ ಮಟ್ಟಕ್ಕೆ: ಏಪ್ರಿಲ್ ನಲ್ಲಿ 0.34% ಕ್ಕೆ ಏರಿಕೆ

ಸಗಟು ಹಣದುಬ್ಬರ 17 ತಿಂಗಳ ನಂತರ ಧನಾತ್ಮಕ ಮಟ್ಟಕ್ಕೆ ಏರಿದ್ದು, ತರಕಾರಿ, ಬೇಳೆ ಕಾಲುಗಳ ಬೆಲೆ ಏರಿಕೆಯಿಂದ ಏಪ್ರಿಲ್ ನ ಹಣದುಬ್ಬರ ದರ ಶೇ.0 .34 ರಷ್ಟಾಗಿದೆ.
ಹಣದುಬ್ಬರ
ಹಣದುಬ್ಬರ
Updated on: 

ನವದೆಹಲಿ: ಸಗಟು ಹಣದುಬ್ಬರ 17 ತಿಂಗಳ ನಂತರ ಧನಾತ್ಮಕ ಮಟ್ಟಕ್ಕೆ ಏರಿದ್ದು, ತರಕಾರಿ, ಬೇಳೆ ಕಾಲುಗಳ ಬೆಲೆ ಏರಿಕೆಯಿಂದ ಏಪ್ರಿಲ್ ನ ಹಣದುಬ್ಬರ ದರ ಶೇ.0 .34 ರಷ್ಟಾಗಿದೆ.

ಮಾರ್ಚ್ ತಿಂಗಳಲ್ಲಿ ಋಣಾತ್ಮಕ ವಲಯದ ಲ್ಲೇ ಮುಂದುವರೆದಿದ್ದ ಹಣದುಬ್ಬರ ದರ ಶೇ.(-)0 .85 ರಷ್ಟಿತ್ತು. ಮೇ.16 ರಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಹೇಳಿವೆ. ಇನ್ನು ಮಾಸಿಕ ಸಗಟು ಹಣದುಬ್ಬರ ಆಧಾರಿತ ವಾರ್ಷಿಕ ಹಣದುಬ್ಬರದ ದರ ಶೇ.0 .36 ಕ್ಕೆ ತಲುಪಿದೆ.

ಋಣಾತ್ಮಕ ವಲಯದಲ್ಲೇ ಇದ್ದ ಕಳೆದ ವರ್ಷದ ಏಪ್ರಿಲ್ ನ ಹಣದುಬ್ಬರ ಏರಿಕೆಯು ಶೇ.(-)2 .43 ರಷ್ಟಿತ್ತು. ಇದು ಒಟ್ಟಾರೆ ಹಣದುಬ್ಬರದ ಮಾಹಿತಿಯಾದರೆ ಮಾರ್ಚ್ ನಲ್ಲಿ ಶೇ.3 .73 ರಷ್ಟಿದ್ದ ಆಹಾರ ಪದಾರ್ಥಗಳ ಹಣದುಬ್ಬರ ಏಪ್ರಿಲ್ ನಲ್ಲಿ  ಶೇ.4 .23 ರಷ್ಟಾಗಿದೆ. ತರಕಾರಿ ಹಾಗೂ ಬೇಳೆಕಾಳುಗಳ ಹಣದುಬ್ಬರ ಅನುಕ್ರಮವಾಗಿ ಶೇ.2 .೨೧(ಮಾರ್ಚ್ ನಲ್ಲಿ ಶೇ - 2.26 ), 34 .45 (ಮಾರ್ಚ್ ನಲ್ಲಿ ಶೇ.-36 .36 ) ರಷ್ಟಾಗಿದೆ.

ತರಕಾರಿ, ಬೇಳೆ ಕಾಲುಗಳ ಹಣದುಬ್ಬರ ಏರಿಕೆಯಾಗಿದ್ದರೂ, ದಿನನಿತ್ಯ ಸೇವಿಸುವ ಪದಾರ್ಥಗಳಾದ ಇರುಳಲಿ ಹಾಗೂ ಹಣ್ಣುಗಳ ಬೆಲೆ ಇಳಿಕೆಯಾಗಿದೆ.  ಕಳೆದ ವಾರ ಬಿಡುಗಡೆಯಾಗಿದ್ದ ಅಂಕಿ ಅಂಶಗಳ ಪ್ರಕಾರ ಚಿಲ್ಲರೆ ಹಣದುಬ್ಬರದಲ್ಲಿ ಶೇ 5.39ರಷ್ಟು ಏರಿಕೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com