ನೋಟು ನಿಷೇಧದ ನಡುವೆಯೂ ಚೀನಾವನ್ನು ಹಿಂದಿಕ್ಕಲಿದೆ ಭಾರತದ ಜಿಡಿಪಿ ಬೆಳವಣಿಗೆ ದರ : ಫಿಚ್ ರೇಟಿಂಗ್

ನೋಟು ನಿಷೇಧ ನಿರ್ಧಾರದ ಹೊರತಾಗಿಯೂ ಭಾರತದ ಜಿಡಿಪಿ, ಮಧ್ಯಮ ಅವಧಿಯಲ್ಲಿ ಚೀನಾದ ಜಿಡಿಪಿಯನ್ನು ಹಿಂದಿಕ್ಕಲಿದೆ ಎಂದು ಜಾಗತಿಕ ರೇಟಿಂಗ್ ಸಂಸ್ಥೆ ಫಿಚ್ ಹೇಳಿದೆ.
ಫಿಚ್ ರೇಟಿಂಗ್
ಫಿಚ್ ರೇಟಿಂಗ್
Updated on
ಚೆನ್ನೈ: ಭಾರತ ಸರ್ಕಾರ ಕಪ್ಪುಹಣ ನಿಯಂತ್ರಣಕ್ಕಾಗಿ ಕೈಗೊಂಡಿರುವ 500, 1000 ರೂ ನೋಟುಗಳ ನಿಷೇಧ ಕ್ರಮದಿಂದ ದೇಶದ ಆರ್ಥಿಕತೆ, ಜಿಡಿಪಿ ಬೆಳವಣಿಗೆ ದರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಆರ್ಥಿಕ ತಜ್ಞರುಗಳಿ ವಿಶ್ಲೇಷಿಸಿದ್ದಾರೆ. ಆದರೆ ಜಾಗತಿಕ ರೇಟಿಂಗ್ ಸಂಸ್ಥೆ ಫಿಚ್ ಇದಕ್ಕೆ ತದ್ವಿರುದ್ಧವೆಂಬಂತಹ ವಿಶ್ಲೇಷಣೆ ನೀಡಿದ್ದು, ನೋಟು ನಿಷೇಧ ನಿರ್ಧಾರದ ಹೊರತಾಗಿಯೂ ಭಾರತದ ಜಿಡಿಪಿ, ಮಧ್ಯಮ ಅವಧಿಯಲ್ಲಿ ಚೀನಾದ ಜಿಡಿಪಿ ಬೆಳವಣಿಗೆ ದರವನ್ನು ಹಿಂದಿಕ್ಕಲಿದೆ ಎಂದು ಹೇಳಿದೆ. 
ಮಧ್ಯಮ ಅವಧಿಯಲ್ಲಿ ಚೀನಾದ ಜಿಡಿಪಿಗಿಂತ ಭಾರತದ ಜಿಡಿಪಿ ಬೆಳವಣಿಗೆ ಹೆಚ್ಚಿರಲಿದೆ ಎಂದು ಫಿಚ್ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದ್ದು, ಸುಧಾರಣೆಗಳ ಜಾರಿ, ವಿತ್ತೀಯ ನೀತಿಗಳ ಬದಲಾವಣೆಯಿಂದಾಗಿ ಭಾರತದ ಜಿಡಿಪಿ 2018ರ ಆರ್ಥಿಕ ವರ್ಷದ ವೇಳೆಗೆ ಏರಿಕೆಯಾಗಲಿದೆ. ಆದರೆ ಚೀನಾದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಿಶಾಲ ಆರ್ಥಿಕತೆಯಲ್ಲಿನ ನಿಯಂತ್ರಣ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತಿದ್ದೆ ಎಂದು ಫಿಚ್ ನ ಏಷ್ಯಾ-ಪೆಸಿಫಿಕ್ ವಿಭಾಗದ ನಿರ್ದೇಶಕ ಥಾಮಸ್ ರೂಕ್ಮಾಕೆರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
2017 ರ ವೇಳೆಗೆ ಚೀನಾದ ಜಿಡಿಪಿ ಬೆಳವಣಿಗೆ ಶೇ.6.4 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದ್ದು, ಮ್ಯಾಕ್ರೊ ಪ್ರುಡೆನ್ಷಿಯಲ್ ನಿತಿಗಳನ್ನು ಬಿಗಿಗೊಳಿಸಿರುವ ಪರಿಣಾಮವಾಗಿ ಈ ಹಿಂದೆ ಶೇ.6.7 ರಷ್ಟಾಗಲಿದೆ ಎಂಬ ಅಂದಾಜಿಗಿಂತ ಕುಸಿದಿದೆ. ಆದರೆ ಭಾರತದ ಜಿಡಿಪಿ 2018-2019 ರ ವೇಳೆಗೆ ಶೇ.8 ರತ್ತ ದಾಪುಗಾಲಿಡಲಿದ್ದು 2016 ರ ವೇಳೆಗೆ ಶೇ.7.4 ರಷ್ಟಾಗಲಿದೆ ಎಂದು ಫಿಚ್ ಹೇಳಿದೆ. 
ಭಾರತದಲ್ಲಿ ಇತ್ತೀಚೆಗಷ್ಟೇ ಕೈಗೊಳ್ಳಲಾದ ನೋಟು ನಿಷೇಧ ಕ್ರಮದ ಬಗ್ಗೆಯೂ ಮಾತನಾಡಿರುವ ಫಿಚ್ ನ ಏಷ್ಯಾ-ಪೆಸಿಫಿಕ್ ವಿಭಾಗದ ನಿರ್ದೇಶಕ, ನೋಟು ನಿಷೇಧದ ಪರಿಣಾಮ ಅಲ್ಪಾವಧಿಯಲ್ಲಿ ಮಾತ್ರ ಪರಿಣಾಮ ಬೀರಲಿದೆ. ಅದೂ ಎಲ್ಲಿಯ ವರೆಗೆ ಹೊಸ ನೋಟುಗಳ ಕೊರತೆ ಎದುರಾಗಲಿದೆಯೋ ಅಲ್ಲಿಯ ವರೆಗೆ ಮಾತ್ರ. ಆದರೆ ಇದರ ಪರಿಣಾಮ ಪ್ರಸಕ್ತ ತ್ರೈಮಾಸಿಕದ ಬೆಳವಣಿಗೆ ದರದಲ್ಲಿ ಗೋಚರವಾಗಲಿದ್ದು, ಪ್ರಸತ್ತ ಆರ್ಥಿಕ ವರ್ಷದ ಮೇಲೆ ನೋಟು ನಿಷೇಧ ಕ್ರಮದ ಪರಿಣಾಮ ಅತ್ಯಂತ ಕಡಿಮೆ ಇರಲಿದ್ದು ರೇಟಿಂಗ್ ದೃಷ್ಟಿಯಿಂದ ನೋಟು ನಿಷೇಧ ಕ್ರಮದಿಂದಾಗಿ ಬಲವಾದ ಆದಾಯ ಹರಿದುಬರಲಿದೆ ಎಂದು ಥಾಮಸ್ ರೂಕ್ಮಾಕೆರ್ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com