ಚೀನಾ ಸರಕು ಬಹಿಷ್ಕಾರದಿಂದ ಭಾರತದ ಜನರಿಗೆ ನೋವುಂಟಾಗಲಿದೆ: ಚೀನಾ

ಭಾರದಲ್ಲಿ ಚೀನಾ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಬೆಂಬಲ ಹೆಚ್ಚುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ, ಭಾರತದಲ್ಲಿ ಚೀನಾ ಸರಕುಗಳನ್ನು ಬಹಿಷ್ಕರಿಸುವುದು ಭಾರತೀಯರಿಗೆ ನೋವುಂಟುಮಾಡಲಿದೆ ಎಂದು ಎಚ್ಚರಿಸಿದೆ.
ಚೀನಾ ಸರಕು ಬಹಿಷ್ಕಾರದಿಂದ ಭಾರತದ ಜನರಿಗೆ ನೋವುಂಟಾಗಲಿದೆ: ಚೀನಾ
ಚೀನಾ ಸರಕು ಬಹಿಷ್ಕಾರದಿಂದ ಭಾರತದ ಜನರಿಗೆ ನೋವುಂಟಾಗಲಿದೆ: ಚೀನಾ

ನವದೆಹಲಿ: ಭಾರತದಲ್ಲಿ ಚೀನಾ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಬೆಂಬಲ ಹೆಚ್ಚುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ, ಭಾರತದಲ್ಲಿ ಚೀನಾ ಸರಕುಗಳನ್ನು ಬಹಿಷ್ಕರಿಸುವುದು ಭಾರತೀಯರಿಗೆ ನೋವುಂಟುಮಾಡಲಿದೆ ಎಂದು ಎಚ್ಚರಿಸಿದೆ.

ಚೀನಾ ಸರಕುಗಳನ್ನು ಬಹಿಷ್ಕರಿಸಿದರೆ ಭಾರತದಲ್ಲಿ ಚೀನಾ ಹೂಡಿಕೆ ಕುಸಿಯುವುದು ಮಾತ್ರವಲ್ಲ, ಭಾರತ-ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧವೂ ಹದಗೆಡಲಿದೆ ಎಂದು ಚೀನಾ ರಾಯಭಾರಿ ಕಚೇರಿ ಹೇಳಿಕೆ ನೀಡಿದೆ.

ಭಾರತ ಚೀನಾ ಸರಕುಗಳನ್ನು ಬಹಿಷ್ಕರಿಸಿದರೆ ಅದರಿಂದ ಚೀನಾ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಏಕೆಂದರೆ ಚೀನಾದ ಒಟ್ಟಾರೆ ರಫ್ತು ಪೈಕಿ ಭಾರತದ ಪಾಲು ಇರುವುದು ಕೇವಲ ಶೇ.2 ರಷ್ಟು ಮಾತ್ರ, ಆದರೆ ಬಹಿಷ್ಕಾರ ಅಭಿಯಾನದಿಂದ ಭಾರತದಲ್ಲಿ ಚೀನಾ ಹೂಡಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ, ಇದರಿಂದ ಭಾರತ- ಚೀನಾ ಜನರಿಗೆ ನೋವುಂಟಾಗಲಿದೆ ಎಂದು ಚೀನಾ ಎಚ್ಚರಿಸಿದೆ. ಚೀನಾ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನದಿಂದ ಈಗಾಗಲೇ ಚೀನಾ ಸರಕುಗಳ ಮಾರಾಟದಲ್ಲಿ ಶೇ.20 ರಷ್ಟು ಕುಸಿತಕ ಕಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಚೀನಾ ಈ ಪ್ರತಿಕ್ರಿಯೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com