ಡೆಬಿಟ್ ಕಾರ್ಡ್ ಡಾಟಾ ವಂಚನೆ: ಎಸ್ ಬಿಐ ನಿಂದ 6 ಲಕ್ಷ ಗ್ರಾಹಕರಿಗೆ ಹೊಸ ಎಟಿಎಂ ಕಾರ್ಡ್

ದೇಶದಲ್ಲಿ ಡೆಬಿಟ್ ಕಾರ್ಡ್ ವಂಚನೆಯ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) 6 ಲಕ್ಷ ಗ್ರಾಹಕರಿಗೆ ಹೊಸ ಡೆಬಿಟ್ ಕಾರ್ಡ್ ನೀಡಲು ಮುಂದಾಗಿದೆ.
ಡೆಬಿಟ್ ಕಾರ್ಡ್ ಡಾಟಾ ವಂಚನೆ: ಎಸ್ ಬಿಐ ನಿಂದ 6 ಲಕ್ಷ ಗ್ರಾಹಕರಿಗೆ ಹೊಸ ಎಟಿಎಂ ಕಾರ್ಡ್
ಡೆಬಿಟ್ ಕಾರ್ಡ್ ಡಾಟಾ ವಂಚನೆ: ಎಸ್ ಬಿಐ ನಿಂದ 6 ಲಕ್ಷ ಗ್ರಾಹಕರಿಗೆ ಹೊಸ ಎಟಿಎಂ ಕಾರ್ಡ್
Updated on: 

ನವದೆಹಲಿ: ದೇಶದಲ್ಲಿ ಡೆಬಿಟ್ ಕಾರ್ಡ್ ವಂಚನೆಯ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) 6 ಲಕ್ಷ ಗ್ರಾಹಕರಿಗೆ ಹೊಸ ಡೆಬಿಟ್ ಕಾರ್ಡ್ ನೀಡಲು ಮುಂದಾಗಿದೆ.   
ಎಸ್ ಬಿಐ ನ 6 ಲಕ್ಷ ಗ್ರಾಹಕರು ಶೀಘ್ರವೇ ಹೊಸ ಡೆಬಿಟ್ ಕಾರ್ಡ್ ಪಡೆಯಲಿದ್ದಾರೆ. ಇತ್ತೀಚೆಗಷ್ಟೇ 3 ಮಿಲಿಯನ್ ಡೆಬಿಟ್ ಕಾರ್ಡ್ ಗಳ ಡಾಟಾ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದ ಹಿನ್ನೆಲೆಯಲ್ಲಿ ಗ್ರಾಹಕರ ಎಟಿಎಂ ಗಳನ್ನು ಬದಲಾವಣೆ ಮಾಡಲು ಬ್ಯಾಂಕ್ ಗಳು ಮುಂದಾಗಿವೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಸ್ಟೇಟ್ ಬ್ಯಾಂಕ್ ಈಗಾಗಲೇ 6.29 ಲಕ್ಷ ಹೊಸ ಡೆಬಿಟ್ ಕಾರ್ಡ್ ಗಳನ್ನು ತಯಾರಿಸಿದ್ದು, ಶೀಘ್ರವೇ ಡಾಟಾ ವಂಚನೆಗೊಳಗಾಗಿದ್ದ ಗ್ರಾಹಕರ ಕೈ ಸೇರಲಿವೆ. ಡಾಟಾ ವಂಚನೆಗೆ ಗುರಿಯಾಗಿದ್ದ ಡೆಬಿಟ್ ಕಾರ್ಡ್ ಗಳನ್ನು ನಿರ್ಬಂಧಿಸಲಾಗಿತ್ತು. ಈ ಪೈಕಿ ಅ.26 ರ ವೇಳೆಗೆ ಶೇ.95.5 ರಷ್ಟು ಕಾರ್ಡ್ ಗಳನ್ನು ಪುನಃ ತಯಾರಿಸಲಾಗಿದ್ದು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಅ.19 ರಂದು ಎಸ್ ಬಿಐ ನೀಡಿದ್ದ ಹೇಳಿಕೆಯ ಪ್ರಕಾರ ಒಟ್ಟು 600,000 ಡೆಬಿಟ್ ಕಾರ್ಡ್ ಗಳನ್ನು ನಿರ್ಬಂಧಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com