ಐಫೋನ್ 6ಎಸ್, 6ಎಸ್ ಪ್ಲಸ್ ಬೆಲೆಯನ್ನು 22,000 ರೂ ಕಡಿತಗೊಳಿಸಿದ ಆಪಲ್

ಐಫೋನ್ ಸ್ಮಾರ್ಟ್ ಫೋನ್ ಇಷ್ಟಪಡುವವರಿಗೆ ಸಂತಸವಾಗುವ ಸುದ್ದಿಯಲ್ಲಿ 6ಎಸ್, 6ಎಸ್ ಪ್ಲಸ್ ಮಾದರಿಯ ಸ್ಮಾರ್ಟ್ ಫೋನ್ ಗಳ ಬೆಲೆಯನ್ನು 22,000 ರೂಪಾಯಿಯಷ್ಟು ಅಮೆರಿಕಾ ತಂತ್ರಜ್ಞಾನ ಸಂಸ್ಥೆ
ಐಫೋನ್ 6ಎಸ್, 6ಎಸ್ ಪ್ಲಸ್ ಮಾದರಿಯ ಸ್ಮಾರ್ಟ್ ಫೋನ್ ಗಳು
ಐಫೋನ್ 6ಎಸ್, 6ಎಸ್ ಪ್ಲಸ್ ಮಾದರಿಯ ಸ್ಮಾರ್ಟ್ ಫೋನ್ ಗಳು
Updated on: 
ನವದೆಹಲಿ: ಐಫೋನ್ ಸ್ಮಾರ್ಟ್ ಫೋನ್ ಇಷ್ಟಪಡುವವರಿಗೆ ಸಂತಸವಾಗುವ ಸುದ್ದಿಯಲ್ಲಿ 6ಎಸ್, 6ಎಸ್ ಪ್ಲಸ್ ಮಾದರಿಯ ಸ್ಮಾರ್ಟ್ ಫೋನ್ ಗಳ ಬೆಲೆಯನ್ನು 22,000 ರೂಪಾಯಿಯಷ್ಟು ಅಮೆರಿಕಾ ತಂತ್ರಜ್ಞಾನ ಸಂಸ್ಥೆ ಆಪಲ್ ಕಡಿಮೆ ಮಾಡಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. 
ಈ ಹಿಂದೆ 82,000 ರೂ ಮುಖಬೆಲೆ ಹೊಂದಿದ್ದ ಐಫೋನ್ 6ಎಸ್(128 ಜಿಬಿ) ಬೆಲೆಯನ್ನು 22000 ರೂ ಕಡಿಮೆ ಮಾಡಿದ್ದು, ಈಗ ಅದು 60,000 ರುಪಾಯಿಗೆ ಲಭ್ಯವಿದೆ. 
ಐಫೋನ್ 6ಎಸ್ ಪ್ಲಸ್ ಬೆಲೆಯನ್ನು ಕೂಡ ಅಷ್ಟೇ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದ್ದು, ಈಗ ಅದು 70 ಸಾವಿರಕ್ಕೆ ಲಭ್ಯವಿದೆ. 
ಈ ವರ್ಷ ಮಾರ್ಚ್ ನಲ್ಲಿ ಬಿಡುಗಡೆಯಾದ 4 ಇಂಚಿನ ಐಫೋನ್ ಎಸ್ ಇ (64 ಜಿಬಿ) 49,000 ದಿಂದ 44000 ರೂಗೆ ಇಳಿದಿದೆ. 
ಇತ್ತೀಚೆಗಷ್ಟೇ ವಿಶ್ವದಾದ್ಯಂತ 2016 ರಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್ ಫೋನ್ ಐಫೋನ್ 6 ಎಸ್ ಎಂದು ತಿಳಿದುಬಂದಿತ್ತು. ಕಳೆದ ವಾರವಷ್ಟೇ ಆಪಲ್ ಸಂಸ್ಥೆ ಐಫೋನ್ 7 ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com