ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ದರವನ್ನು 58 ಪೈಸೆ ಏರಿಕೆ ಮಾಡಿ ಡೀಸೆಲ್ ಬೆಲೆಯನ್ನು 31 ಪೈಸೆಯಷ್ಟು ಇಳಿಕೆ ಮಾಡಿದೆ.
ಇಂದು ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿನ ವ್ಯತ್ಯಾಸ ಮತ್ತು ಭಾರತ-ಅಮೆರಿಕ ರೂಪಾಯಿ ವಿನಿಮಯ ಪ್ರಮಾಣದಲ್ಲಿ ಹೆಚ್ಚಳ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮೇಲೆ ಪರಿಣಾಮ ಬೀರಿದ್ದು ಅದರಂತೆ ಗ್ರಾಹಕರಿಗೆ ತೈಲ ದರದಲ್ಲಿ ವ್ಯತ್ಯಾಸ ಮಾಡಲಾಗಿದೆ ಎಂದು ನಿಗಮ ಹೇಳಿಕೆಯಲ್ಲಿ ತಿಳಿಸಿದೆ.