ಟೆಕ್ ಮಹಿಂದ್ರಾ ವಿರುದ್ಧ ತಿರುಗಿಬಿದ್ದ ಕಾರ್ಮಿಕರು, ವಜಾ ಪ್ರಶ್ನಿಸಿ ಕೋರ್ಟ್ ನಲ್ಲಿ ದಾವೆ

ಇತ್ತೀಚೆಗಷ್ಟೇ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದ್ದ ಟೆಕ್ ಮಹಿಂದ್ರಾ ಸಂಸ್ಥೆಯ ವಿರುದ್ಧ ಕಾರ್ಮಿಕರು ತಿರುಗಿಬಿದ್ದಿದ್ದು, 11 ಕಾರ್ಮಿಕರ ತಂಡವೊಂದು ಸಂಸ್ಥೆ ವಿರುದ್ಧ ಕಾರ್ಮಿಕ ನ್ಯಾಯಾಲಯದಲ್ಲಿ ದಾವೆ ಹೂಡಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇತ್ತೀಚೆಗಷ್ಟೇ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದ್ದ ಟೆಕ್ ಮಹಿಂದ್ರಾ ಸಂಸ್ಥೆಯ ವಿರುದ್ಧ ಕಾರ್ಮಿಕರು ತಿರುಗಿಬಿದ್ದಿದ್ದು, 11 ಕಾರ್ಮಿಕರ ತಂಡವೊಂದು ಸಂಸ್ಥೆ ವಿರುದ್ಧ ಕಾರ್ಮಿಕ ನ್ಯಾಯಾಲಯದಲ್ಲಿ ದಾವೆ  ಹೂಡಲು ಮುಂದಾಗಿದೆ.

ಐಟಿ ಸಂಸ್ಥೆ ಟೆಕ್ ಮಹೀಂದ್ರ ಹಾಗೂ ಮಹಾರಾಷ್ಟ್ಕ ಕಾರ್ಮಿಕ ಅಧಿಕಾರಿಗಳ ನಡುವಿನ ಸಂಧಾನ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಕಾರ್ಮಿಕರು ಸಂಸ್ತೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ ಎಂದು  ತಿಳಿದುಬಂದಿದೆ. ಮೂಲಗಳ ಪ್ರಕಾರ ಕೆಲಸ ಕಳೆದುಕೊಂಡ 11 ಮಂದಿ ಕಾರ್ಮಿಕರ ತಂಡವೊಂದು ಕಾರ್ಮಿಕ ಕಾಯ್ದೆ ಸೆಕ್ಷನ್ 2ಎ ಅಡಿಯಲ್ಲಿ ಸಂಸ್ಛೆಯ ವಿರುದ್ಧ ದಾವೆ ಹೂಡಲು ನಿರ್ಧರಿಸಿರುವುದಾಗಿ ಎಫ್ ಐಟಿಇ ಸಂಯೋಜಕ  ಇಳವರಸನ್ ರಾಜಾ ಹೇಳಿದ್ದಾರೆ.

ಕಾರ್ಮಿಕ ಕಾಯ್ದೆ 2ಎ ಅಡಿಯಲ್ಲಿ ಯಾವುದೇ ಕಾರ್ಮಿಕನನ್ನು ವಜಾ ಗೊಳಿಸುವುಗು ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಸಂಸ್ಥೆಯ ಕೈಗಾರಿಕಾ ವಿವಾದವೆಂದು ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ,. ಇನ್ನು ಈ ಬಗ್ಗೆ  ಪ್ರತಿಕ್ರಿಯೆ ನೀಡಲು ಟೆಕ್ ಮಹೀಂದ್ರ ಸಮೂಹ ಸಂಸ್ಥೆ ಹಿಂದೇಟು ಹಾಕಿದ್ದು, ವ್ಯಾಜ್ಯ ನ್ಯಾಯಾಲಯದಲ್ಲಿರುವುದರಿಂದ ತಾವು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ,

ಕಳೆದ ತಿಂಗಳಷ್ಟೇ ಚೆಕ್ ಮಹಿದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹಿಂದ್ರಾ ಅವರು ಕ್ಷಮೆ ಕೋರಿದ್ದರು. ಟೆಕ್ಕಿಗಳನ್ನು ಕೆಲಸದಿಂದ ವಜಾ ಮಾಡುವ ಸಲುವಾಗಿ ಸಂಸ್ಥೆಯ ಕಾರ್ಮಿಕರಿಂದಲೇ ರಾಜಿನಾಮೆ ಕೇಳಿತ್ತು,. ಇದರ ಆಡಿಯೋ  ಮಾಧ್ಯಮಗಳಲ್ಲಿ ಪ್ರಸಾರವಾಗಿ ವ್ಯಾಪಕ ವಿವಾದಕ್ಕೆ ಕಾರಣವಾಗಿತ್ತು,  ಈ ಆಡಿಯೋ ಟೇಪ್ ವೈರಲ್ ಆಗುತ್ತಿದ್ದಂತೆಯೇ ಅವರು ಕ್ಷಮೆ ಕೋರಿದ್ದರು. ಭಾರತದಲ್ಲಿ ಟೆಕ್ ಮಹಿಂದ್ರಾ ಸಂಸ್ಥೆ 5ನೇ ಅತೀ ದೊಡ್ಡ ಐಟಿ ಸಂಸ್ಥೆಯಾಗಿದ್ದು,  2016ರ ಡಿಸೆಂಬರ್ ನಲ್ಲಿ ಸಂಸ್ಥೆಯಲ್ಲಿ ಸುಮಾರು 1.17ಲಕ್ಷ ಮಂದಿ ಕಾರ್ಮಿಕರನ್ನು ಹೊಂದಿತ್ತು.

ಅಮೆರಿಕದಲ್ಲಿ ಟ್ರಂಪ್ ಆಡಳಿತ ಬಂದಾಗಿನಿಂದಲೂ ಐಟಿ ಕ್ಷೇತ್ರದಲ್ಲಿ ತಲ್ಲಣ ಉಂಟಾಗಿದ್ದು, ನಷ್ಟ ತಾಳಲಾರದೇ ವ್ಯಾಪಕವಾಗಿ ಕಾರ್ಮಿಕರನ್ನು ವಜಾ ಮಾಡಲಾಗುತ್ತಿದೆ. ಈ ಹಿಂದೆ ಅಮೆರಿಕ ಮೂಲದ ಕಾಗ್ನಿಜೆಂಟ್ ಸಂಸ್ಥೆ ಕೂಡ ತನ್ನ  ಸಂಸ್ಥೆಯ ವಿವಿಧ ಸ್ತರದ ಕಾರ್ಮಿಕರನ್ನು ವಜಾ ಮಾಡಿತ್ತು. ಅಲ್ಲದೆ ತಾವೇ ತಾವಾಗಿ ರಾಜಿನಾಮೆ ನೀಡುವ ಕಾರ್ಮಿಕರಿಗೆ 6 ರಿಂದ 9 ತಿಂಗಳ ವೇತನ ನೀಡುವ ಆಮಿಷ ಒಡ್ಡಿತ್ತು. ಭಾರತದ ವಿಪ್ರೋ ಸಂಸ್ಥೆ ಕೂಡ 600 ಕಾರ್ಮಿಕರನ್ನು  ವಜಾ ಮಾಡಲು ಈ ಹಿಂದೆ ನಿರ್ಧರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com