ನಿಷೇಧಿತ ನೋಟುಗಳನ್ನು ಹೊಂದುವುದು ಶಿಕ್ಷಾರ್ಹ: ಕೇಂದ್ರ ಸರ್ಕಾರದ ಅಧಿಸೂಚನೆ

ನಿಷೇಧಿತ 500, 1000 ರೂ ನೋಟುಗಳನ್ನು ಇಟ್ಟುಕೊಳ್ಳುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ನಿಷೇಧಿತ ನೋಟು
ನಿಷೇಧಿತ ನೋಟು
ನವದೆಹಲಿ: ನಿಷೇಧಿತ 500, 1000 ರೂ ನೋಟುಗಳನ್ನು ಇಟ್ಟುಕೊಳ್ಳುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. 
ಕೇಂದ್ರ ಸರ್ಕಾರದ ಅಧಿಸೂಚನೆಯ ಪ್ರಕಾರ 10 ಕ್ಕಿಂತ ಹೆಚ್ಚು ನಿಷೇಧಿತ ನೋಟುಗಳನ್ನು ಇಟ್ಟುಕೊಂಡಿದ್ದರೆ ಶಿಕ್ಷಾರ್ಹ ಅಪರಾಧವಾಗಲಿದ್ದು, 10,000 ರೂ ವರೆಗೆ ದಂಡ ವಿಧಿಸಬಹುದಾಗಿದೆ. ನಿಗದಿಪಡಿಸಿದ ಬ್ಯಾಂಕ್ ನೋಟು ಕಾಯ್ದೆ 2017 ಮಸೂದೆಯನ್ನು ಕಳೆದ ತಿಂಗಳು ಸಂಸತ್ ನಲ್ಲಿ ಅಂಗೀಕರಿಸಲಾಗಿತ್ತು. ಮಸೂದೆಗೆ ಫೆ.27 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಿದ್ದರು. ಮಸೂದೆಯಲ್ಲಿ 2016 ರ ನ.9 ರಿಂದ ಡಿಸೆಂಬರ್ 30 ವರೆಗೆ ವಿದೇಶದಲ್ಲಿದ್ದ ಭಾರತೀಯರಿಗೆ ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಮಾ.31 ರ ವರೆಗೆ ಅವಕಾಶ ನೀಡಲಾಗಿದೆ. 
ಅಧಿಸೂಚನೆ ಹೊರಡಿಸಲಾಗಿರುವ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ 10 ನೋಟುಗಳಿಗಿಂತ ಹೆಚ್ಚು ಹಾಗೂ ಅಧ್ಯಯನ, ಸಂಶೋಧನೆ ಕೆಲಸಗಳಿಗೆ 25 ಕ್ಕಿಂತ ಹೆಚ್ಚು ನೋಟುಗಳನ್ನು ಹೊಂದಿರುವುದು ಶಿಕ್ಷಾರ್ಹ ಅಪರಾಧವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com