ಮಾರ್ಚ್ 1ರಿಂದ ತಮಿಳುನಾಡಿನಲ್ಲಿ ಪೆಪ್ಸಿ, ಕೋಕಕೋಲಾ ಮಾರಾಟವಿಲ್ಲ?

ಭಾರತೀಯ ತಂಪುಪಾನೀಯ ಮಾರುಕಟ್ಟೆಯಲ್ಲಿ ಅನಭಿಶಕ್ತ ದೊರೆಯಂತಿರುವ ಪೆಪ್ಸಿ ಹಾಗೂ ಕೋಕ ಕೋಲಾ ಸಂಸ್ಥೆಗಳ ತಂಪು ಪಾನೀಯಗಳನ್ನು ಮಾರ್ಚ್ 1ರಿಂದ ಮಾರಾಟ ಮಾಡುವುದಿಲ್ಲ....
ವಿದೇಶಿ ತಂಪುಪಾನೀಯಗಳು
ವಿದೇಶಿ ತಂಪುಪಾನೀಯಗಳು
Updated on

ಚೆನ್ನೈ: ಭಾರತೀಯ ತಂಪುಪಾನೀಯ ಮಾರುಕಟ್ಟೆಯಲ್ಲಿ ಅನಭಿಶಕ್ತ ದೊರೆಯಂತಿರುವ ಪೆಪ್ಸಿ ಹಾಗೂ ಕೋಕ ಕೋಲಾ ಸಂಸ್ಥೆಗಳ ತಂಪು ಪಾನೀಯಗಳನ್ನು ಮಾರ್ಚ್ 1ರಿಂದ ಮಾರಾಟ ಮಾಡುವುದಿಲ್ಲ ಎಂದು ತಮಿಳುನಾಡು  ವ್ಯಾಪಾರಿಗಳ ಒಕ್ಕೂಟ ಹೇಳಿದೆ ಎಂದು ತಿಳಿದುಬಂದಿದೆ.

ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ ದೇಶೀಯ ಉತ್ಪನ್ನಗಳ ಮಾರಾಟ ಉತ್ತೇಜನಕ್ಕಾಗಿ ವಿದೇಶಿ ಸಂಸ್ಥೆಗಳಾದ ಪೆಪ್ಸಿ ಮತ್ತು ಕೋಕಕೋಲಾ ತಂಪುಪಾನೀಯಗಳ ಮಾರಟವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ  ಎಂದು ತಮಿಳುನಾಡು ವ್ಯಾಪಾರಸ್ಥರ ಒಕ್ಕೂಟ ನಿರ್ಧರಿಸಿದೆ. ಹೀಗಾಗಿ ಇದೇ ಮಾರ್ಚ್ 1 ರಿಂದ ತಮಿಳುನಾಡಿನಾದ್ಯಂತ ಪೆಪ್ಸೆ ಮತ್ತು ಕೋಕಕೋಲಾ ತಂಪುಪಾನೀಯಗಳ ಮಾರಾಟವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು  ಹೇಳಲಾಗಿದೆ.

ಕೇವಲ ತಂಪುಪಾನೀಯಗಳಷ್ಟೇ ಅಲ್ಲದೇ ವಿದೇಶಿ ಸಂಸ್ಥೆಗಳ ಮಿನರಲ್ ವಾಟರ್ (ನೀರಿನ ಬಾಟಲ್) ಬಾಟಲ್ ಗಳನ್ನೂ ಮಾರಾಟ ಮಾಡದಿರಲು ಒಕ್ಕೂಟ (Tamil Nadu Vanigar Sangangalin Peramaippu- TVSP) ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಒಕ್ಕೂಟದ ಅಧ್ಯಕ್ಷರಾಗಿರುವ ಎ.ಎಂ.ವಿಕ್ರಮರಾಜ ಅವರು ಈ ಬಗ್ಗೆ ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದು, ತಮ್ಮ ತಂಡದೊಂದಿಗೆ ತಮಿಳುನಾಡು  ವ್ಯಾಪಾರಸ್ಥರೊಂದಿಗೆ ಫೆಬ್ರವರಿ ತಿಂಗಳು ಪೂರ್ತಿ ಸಭೆಗಳನ್ನು ನಡೆಸಿ ಈ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಂಘದ ಅಧ್ಯಕ್ಷ ಎ.ಎಂ.ವಿಕ್ರಮರಾಜ ಅವರು, ಮುಂದಿನ ತಿಂಗಳು ಪೂರ್ತಿ ವಿದೇಶಿ ಬ್ರಾಂಡ್‌ಗಳಿಂದ ಉಂಟಾಗುವ ಹಾನಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಲವು ಕಾರ್ಯಕ್ರಮಗಳನ್ನು  ಆಯೋಜಿಸಲಾಗಿದೆ. ಜನಪ್ರಿಯ ವಿದೇಶಿ ಬ್ರಾಂಡ್‌ ಒಂದು ಮಕ್ಕಳಿಗೆ ಉಪಯೋಗಿಸಲು ಯೋಗ್ಯವಲ್ಲ ಎಂಬ ಬಗ್ಗೆ ಕಂಪನಿಯೇ ಒಪ್ಪಿಕೊಂಡಿತ್ತು. ಹೀಗಾಗಿ ಮಾರಾಟ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ ಎಂದು  ವರದಿಯಲ್ಲಿ ತಿಳಿಸಲಾಗಿದೆ.

ಜಲ್ಲಿಕಟ್ಟು ಪ್ರತಿಭಟನೆ ವೇಳೆಯಲ್ಲೇ ವಿದೇಶಿ ಕಂಪನಿಗಳ ಮೇಲೆ ವ್ಯಕ್ತವಾಗಿತ್ತು ಆಕ್ರೋಶ
ಇನ್ನು ಇತ್ತೀಚೆಗೆ ಇಡೀ ತಮಿಳುನಾಡು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಧಕ್ಕೆಗೆ ಕಾರಣವಾಗಿದ್ದ ಜಲ್ಲಿಕಟ್ಟು ಪ್ರತಿಭಟನೆ ಸಂದರ್ಭದಲ್ಲೇ ಹಲವು ಪ್ರತಿಭಟನಾಕಾರರು ವಿದೇಶ ಕಂಪನಿಗಳ ವಸ್ತುಗಳನ್ನು ನಿಷೇಧಿಸುವಂತೆ  ಆಗ್ರಹಿಸಿದ್ದರು. ಆದರೆ ಅಂದು ಒಕ್ಕೂಟದ ಪದಾಧಿಕಾರಿಗಳು ವಸ್ತುಗಳನ್ನು ನಿಷೇಧಿಸುವ ಅಧಿಕಾರ ತಮಗಿಲ್ಲ. ಆದರೆ ಈ ವಸ್ತುಗಳನ್ನು ಮಾರಾಟ ಮಾಡದಂತೆ ವ್ಯಾಪಸ್ಥರಲ್ಲಿ ಜಾಗೃತಿ ಮೂಡಿಸಬಹುದು ಎಂದು ಹೇಳಿದ್ದರು.  ಅದರಂತೆ ಇದೀಗ ಮಾರಾಟ ನಿಲ್ಲಿಸುವಂತೆ ವ್ಯಾಪಾರಸ್ಥರಿಗೆ ಸೂಚನೆ ನೀಡುವ ಕುರಿತು ಒಕ್ಕೂಟ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಅಧಿಕೃತ ಹೇಳಿಕೆ ಇಲ್ಲ!
ಇನ್ನು ಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿ ಕುರಿತಂತೆ ತಮಿಳುನಾಡು ವರ್ತಕರ ಸಂಘದಿಂದ ಈ ವರೆಗೂ ಯಾವುದೇ ಅಧಿಕೃತ ಹೇಳಿಕೆಗಳು ಬಿಡುಗಡೆಯಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com