ಸೂಪರ್ ಫಾಸ್ಟ್: ಬಿಎಸ್ ಎನ್ ಎಲ್ ನಿಂದ 1000MBPS ಮೆಗಾಸ್ಪೀಡ್ ಇಂಟರ್ ನೆಟ್!

ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ಎಲ್ ಸಂಸ್ಥೆ ಗ್ರಾಹಕರನ್ನು ಸೆಳೆಯಲು ಅಲ್ಟ್ರಾಸ್ಪೀಡ್ ಇಂಟರ್ ನೆಟ್ ಸೇವೆಯನ್ನು ನೀಡಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ಎಲ್ ಸಂಸ್ಥೆ ಗ್ರಾಹಕರನ್ನು ಸೆಳೆಯಲು ಅಲ್ಟ್ರಾಸ್ಪೀಡ್ ಇಂಟರ್ ನೆಟ್ ಸೇವೆಯನ್ನು ನೀಡಲು ಮುಂದಾಗಿದೆ.

ಈಗಾಗಲೇ ಬಿಎಸ್ ಎನ್ ಎಲ್ ಫೈಬರ್ ಟು ಹೋಮ್ ಎಂಬ ಯೋಜನೆಯಡಿಯಲ್ಲಿ ಪ್ರತೀ ಸೆಕೆಂಡ್ ಗೆ 100 ಎಂಬಿಪಿಎಸ್ ವೇಗದ ಇಂಟರ್ ನೆಟ್ ಒದಗಿಸುತ್ತಿದ್ದು, ಹೊಸದೊಂದು ಯೋಜನೆ ಮೂಲಕ ಇದರ ನೂರುಪಟ್ಟು ಅಂದರೆ  1 ಸಾವಿರ ಎಂಬಿಪಿಎಸ್ ವೇಗದ ಇಂಟರ್ ನೆಟ್ ನೀಡುವ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಬಗ್ಗೆ ವಿವರ ನೀಡಿರುವ ಕೇಂದ್ರ ಟಿಲಿಕಾಂ ಸಚಿವ ಮನೋಜ್ ಸಿನ್ಹಾ ಅವರು, ಮುಂದಿನ ತಲೆಮಾರಿನ ಆಪ್ಟಿಕಲ್  ಫೈಬರ್ ತಂತ್ರಜ್ಞಾನದ ಮೂಲಕ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಸಂಸ್ಥೆ ಪ್ರತೀ ಸೆಕೆಂಡ್ ಗೆ 1000 ಎಂಬಿ ದತ್ತಾಂಶ ಡೌನ್ ಲೋಡ್ ಗೆ ಅವಕಾಶ ಕಲ್ಪಿಸಲಿದೆ  ಎಂದು ಹೇಳಿದ್ದಾರೆ.

ಪ್ರಸ್ತುತ ಬಿಎಸ್ಎನ್ಎಲ್ ಸಂಸ್ಥೆ ತನ್ನ ಫೈಬರ್ ಟು ದ ಹೋಮ್ ಯೋಜನೆಯಡಿಯಲ್ಲಿ ಗರಿಷ್ಠ 100 ಎಂಬಿ ಪರ್ ಸೆಕೆಂಡ್ ವೇಗದ ಇಂಟರ್ ನೆಟ್ ಸೇವೆ ಒದಗಿಸುತ್ತಿದ್ದು, ಇದನ್ನು ನೂರು ಪಟ್ಟು ಹೆಚ್ಚಿಸುವ ಯೋಜನೆ ಶೀಘ್ರ  ಜಾರಿಯಾಗಲಿದೆ. ಇದಕ್ಕಾಗಿ ಎನ್ ಜಿ ಒಟಿಹೆಚ್ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು. ಇದು ದೇಶದ ಪ್ರಮುಖ 44 ರಾಜಧಾನಿ ನಗರಗಳನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡು ಇಲ್ಲಿ ಅಲ್ಟ್ರಾ ಸ್ಪೀಡ್ ಇಂಟರ್ ನೆಟ್ ಸೇವೆಯನ್ನು  ಒದಗಿಸಲಿದೆ. ಇದೇ ಯೋಜನೆಯಡಿಯಲ್ಲಿ ಮುಂದಿನ ದಿನಗಳಲ್ಲಿ ಮತ್ತೆ 100 ನಗರಗಳನ್ನು ವ್ಯಾಪ್ತಿಗೆ ಸೇರಿಸುವ ಉದ್ದೇಶ ಕೂಡ ಇದೆ ಎಂದು ಅವರು ಹೇಳಿದ್ದಾರೆ.

ಈ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಒಟ್ಟು 330 ಕೋಟಿ ಬಂಡವಾಳ ಹೂಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com