ವಾಟ್ಸ್ ಆಪ್ ನಲ್ಲಿ ಡಿಜಿಸಿಎ ಅಧಿಕಾರಿಯ ನಿಂದನೆ: ದೆಹಲಿ ಪೊಲೀಸರಿಂದ 34 ಪೈಲಟ್ ಗಳ ವಿಚಾರಣೆ

ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಅಧಿಕಾರಿಗಳನ್ನು ವಾಟ್ಸ್ ಆಪ್ ನಲ್ಲಿ ಅಶ್ಲೀಲವಾಗಿ ನಿಂದಿಸಿದ ಆರೋಪಕ್ಕೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಅಧಿಕಾರಿಗಳನ್ನು ವಾಟ್ಸ್ ಆಪ್ ನಲ್ಲಿ ಅಶ್ಲೀಲವಾಗಿ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ ದೆಹಲಿ ಪೊಲೀಸರು ಜೆಟ್ ಏರ್ವೇಸ್ ನ 10 ಪೈಲಟ್ ಗಳು ಸೇರಿದಂತೆ ಒಟ್ಟು 34 ಪೈಲಟ್ ಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಡಿಜಿಸಿಎ ನೀಡಿದ ದೂರಿನ ಹಿನ್ನೆಲೆಯಲ್ಲಿ ಇಂದು ಹಲವು ಪೈಲಟ್ ಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಪೈಲಟ್ ಗಳನ್ನು ಬಂಧಿಸಿರುವ ಬಗ್ಗೆ ಇದುವರೆಗೂ ಮಾಹಿತಿ ನೀಡಿಲ್ಲ.
ಸಾಮಾಜಿಕ ತಾಣದಲ್ಲಿ ನಮ್ಮ ಅಧಿಕಾರಿಗಳನ್ನು ನಿಂದಿಸಿದ ಹಿನ್ನೆಲೆಯಲ್ಲಿ ಡಿಜಿಸಿಎ ದೂರು ದಾಖಲಿಸಿದ್ದು, ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿಮಾನಯಾನ ನಿರ್ದೇಶನಾಲಯದ ಮಹಾ ನಿರ್ದೇಶಕ ಬಿ.ಎಸ್. ಭುಲ್ಲವರ್ ಅವರು ಹೇಳಿದ್ದಾರೆ.
ವಾಟ್ಸ್ ಗ್ರೂಪ್ ನಲ್ಲಿ ವಿವಿಧ ವಿಮಾನಯಾನ ಸಂಸ್ಥೆಗಳ ಕನಿಷ್ಠ 34 ಪೈಲಟ್ ಗಳು ನನ್ನನ್ನು ಅಶ್ಲೀಲವಾಗಿ ಟೀಕಿಸಿದ್ದರು. ಹೀಗಾಗಿ ನಾನು ಪೊಲೀಸರಿಗೆ ದೂರು ನೀಡಿದ್ದೆ ಎಂದು ಡಿಜಿಸಿಎ ಅಧಿಕಾರಿ ಲಲಿತ್ ಗುಪ್ತಾ ಅವರು ಐಎನ್ಐ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com