ನವದೆಹಲಿ: ಹಗಲುಗನಸಿನ ನೋಟ (ಡೇಡ್ರೀಮ್ ವ್ಯೂ) ನೀಡುವ ವರ್ಚ್ಯುಯಲ್ ರಿಯಾಲಿಟಿ (ವಿ ಆರ್) ಹೆಡ್ ಸೆಟ್ ಅನ್ನು ಗೂಗಲ್ ಸೋಮವಾರ ಭಾರತದಲ್ಲಿ ಪರಿಚಯಿಸಿದೆ. ಇದರ ಬೆಲೆ ೬೪೯೯ ರೂ.
"ಡೇಡ್ರೀಮ್ ವ್ಯೂ" ಬಳಕೆದಾರರು ಕ್ರೀಡೆ, ನೇರಪ್ರಸಾರದ ಕಾರ್ಯಕ್ರಮಗಳನ್ನು ೩೬೦ ಡಿಗ್ರಿ ಪನೋರಾಮಿಕ್ ನೋಟದಲ್ಲಿ ಕಾಣಬಹುದಾಗಿದೆ.
ಗೂಗಲ್ ನ ಪಿಕ್ಸೆಲ್ ಮತ್ತು ಪಿಕ್ಸೆಲ್ ಎಕ್ಸ್ ಎಲ್ ಡೇಡ್ರೀಮ್ ಒಳಗೊಂಡಿರುವ ಮೊದಲ ಫೋನ್ ಗಳಾಗಿವೆ. ಶೀಘ್ರದಲ್ಲಿಯೇ ಮೋಟೋ ಜೀ, ಸ್ಯಾಮ್ಸನ್ಗ್ ಗ್ಯಾಲೆಕ್ಸಿ ಮತ್ತು ಎಸ್ ೮ ಫೋನ್ ಗಳಲ್ಲಿ ಕೂಡ ಡೇಡ್ರೀಮ್ ಅನುಭವ ಪಡೆಯಬಹುದಾಗಿದೆ.
ಈ ಉತ್ಪನ್ನದ ಜೊತೆಗೆ ಒಂದು ನಿಯಂತ್ರಕವು ಲಭ್ಯವಿದ್ದು, ನಿಜ ಜೀವನದಲ್ಲಿ ಬಳಕೆದಾರರು ವ್ಯಹರಿಸುವಂತೆ ವರ್ಚುಯಲ್ ಲೋಕದಲ್ಲಿಯೂ ವ್ಯವಹರಿಸಲು ಅವಕಾಶ ನೀಡುತ್ತದೆ.