ಇನ್ಫೋಸಿಸ್ ಗೆ ಹಿನ್ನಡೆ: ಸಂಸ್ಥೆ ತೊರೆದ ಅಮೆರಿಕಾ ಮುಖ್ಯಸ್ಥ ಸಂದೀಪ್ ದಾದ್ಲಾನಿ

ಇನ್ಫೋಸಿಸ್ ನ ಅಮೆರಿಕ ಮುಖ್ಯಸ್ಥ ಹಾಗೂ ರೀಟೇಲ್ ಹಾಗೂ ಮ್ಯಾನುಫ್ಯಾಕ್ಚರಿಂಗ್ ವಿಭಾಗದ ಜಾಗತಿಕ ಮುಖ್ಯಸ್ಥ ಸಂದೀಪ್ ದದ್ಲಾನಿ ಸಂಸ್ಥೆಯನ್ನು ತೊರೆದಿದ್ದಾರೆ.
ಇನ್ಫೋಸಿಸ್
ಇನ್ಫೋಸಿಸ್
ಬೆಂಗಳೂರು: ಇನ್ಫೋಸಿಸ್ ನ ಅಮೆರಿಕ ಮುಖ್ಯಸ್ಥ ಹಾಗೂ ರೀಟೇಲ್ ಹಾಗೂ ಮ್ಯಾನುಫ್ಯಾಕ್ಚರಿಂಗ್ ವಿಭಾಗದ ಜಾಗತಿಕ ಮುಖ್ಯಸ್ಥ ಸಂದೀಪ್ ದದ್ಲಾನಿ ಸಂಸ್ಥೆಯನ್ನು ತೊರೆದಿದ್ದಾರೆ. 
ಅಮೆರಿಕಾದಲ್ಲಿ ಕಠಿಣ ವೀಸಾ ನೀತಿ ಹಾಗೂ ದೇಶದಲ್ಲಿ ಸಂಸ್ಥಾಪಕರ ನಡುವೆ ಭಿನ್ನಾಭಿಪ್ರಾಯ ತಲೆದೋರಿರುವ ಸಂದರ್ಭದಲ್ಲೇ ಅಮೆರಿಕ ಮುಖ್ಯಸ್ಥ ದದ್ಲಾನಿ ಸಂಸ್ಥೆ ತೊರೆದಿರುವುದು ಸಂಸ್ಥೆಗೆ ಸವಾಲಾಗಿ ಪರಿಣಮಿಸಿದೆ. ದದ್ಲಾನಿ ಸಂಸ್ಥೆಗೆ ರಾಜೀನಾಮೆ ನೀಡಿರುವ ಬಗ್ಗೆ ಇನ್ಫೋಸಿಸ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಸಂದೀಪ್ ದದ್ಲಾನಿ ಇನ್ಫೋಸಿಸ್ ಗೆ ರಾಜೀನಾಮೆ ನೀಡಿದ್ದಾರೆ. ದದ್ಲಾನಿ ನಿರ್ವಹಿಸುತ್ತಿದ್ದ ರೀಟೇಲ್ ವಿಭಾಗದ ಗ್ಲೋಬಲ್ ಮುಖ್ಯಸ್ಥ, ಸಿಪಿಜಿ ಹಾಗೂ ಲಾಜಿಸ್ಟಿಕ್ಸ್(ಆರ್ ಸಿಎಲ್)  ಹುದ್ದೆಗೆ ಕರ್ಮೇಶ್ ವಸ್ವಾನಿ ಅವರನ್ನು ನೇಮಕ ಮಾಡಲಾಗಿದೆ, ಇನ್ನು ಮ್ಯಾನುಫ್ಯಾಕ್ಚರಿಂಗ್ ವಿಭಾಗದ ಮುಖ್ಯಸ್ಥರ ಹುದ್ದೆಗೆ ನಿತೇಶ್ ಬಂಗಾ ಅವರನ್ನು ನೇಮಕ ಮಾಡಲಾಗಿದ್ದು ಜು.15 ರಿಂದ ಆದೇಶ ಜಾರಿಗೆ ಬರಲಿದೆ ಎಂದು ಸಂಸ್ಥೆ  ತಿಳಿಸಿದೆ. 
ನಿತೇಶ್ ಬಂಗಾ ಹಾಗೂ ಕರ್ಮೇಶ್ ವಸ್ವಾನಿ ಕಳೆದ ಒಂದು ದಶಕಗಳಿಂದ ಇನ್ಫೋಸಿಸ್ ನಲ್ಲಿ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದು, ಸಂಸ್ಥೆ ಇಬ್ಬರಿಗೂ ಅಭಿನಂದನೆ ಸಲ್ಲಿಸುತ್ತದೆ ಎಂದು ಸಿಇಒ ವಿಶಾಲ್ ಸಿಕ್ಕಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com