ವಿಶಾಲ್ ಸಿಕ್ಕಾ, ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ
ವಿಶಾಲ್ ಸಿಕ್ಕಾ, ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ

ಭಾರತೀಯ ಐಟಿ ಕಂಪೆನಿಗಳು ಹೆಚ್-1 ಬಿ ವೀಸಾವನ್ನು ಅವಲಂಬಿಸಿಲ್ಲ: ವಿಶಾಲ್ ಸಿಕ್ಕಾ

ಭಾರತೀಯ ಐಟಿ ಕಂಪೆನಿಗಳು ಹೆಚ್ಚಾಗಿ ಅಮೆರಿಕಾದ ಹೆಚ್-1 ಬಿ ವೀಸಾಗಳನ್ನು ಅವಲಂಬಿಸಿಕೊಂಡಿವೆ...
ವಾಷಿಂಗ್ಟನ್: ಭಾರತೀಯ ಐಟಿ ಕಂಪೆನಿಗಳು ಹೆಚ್ಚಾಗಿ ಅಮೆರಿಕಾದ ಹೆಚ್-1 ಬಿ ವೀಸಾಗಳನ್ನು  ಅವಲಂಬಿಸಿಕೊಂಡಿವೆ ಎಂಬ ಸಾಮಾನ್ಯ ಅನಿಸಿಕೆಗಳನ್ನು ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿಶಾಲ್ ಸಿಕ್ಕಾ ನಿರಾಕರಿಸಿದ್ದಾರೆ. ತನ್ನ ವಹಿವಾಟಿಗೆ ವಿದೇಶಿ ಕೆಲಸಗಾರರನ್ನು ಕಡಿಮೆ ವೇತನಕ್ಕೆ ನೇಮಿಸಿಕೊಂಡು ದೌರ್ಜನ್ಯವೆಸಗುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸಲು ಡೊನಾಲ್ಡ್ ಟ್ರಂಪ್ ಆಡಳಿತ ಹೆಚ್-1 ಬಿ ವೀಸಾ ನೀಡಿಕೆಗೆ ಕಟ್ಟುನಿಟ್ಟಿನ ನಿಯಮ ಹೇರಿರುವುದರಿಂದ ಭಾರತೀಯ ಐಟಿ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯವನ್ನು ಅವರು ತಳ್ಳಿಹಾಕಿದ್ದಾರೆ.
ಭಾರತೀಯ ಐಟಿ ಕಂಪೆನಿಗಳು  ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಅವಕಾಶಗಳನ್ನು ಬಾಚಿಕೊಳ್ಳಬೇಕು. ವೇಗವಾಗಿ ಬದಲಾಗುವ ಇನ್ಫೋಟೆಕ್ ಪರಿಸರದಲ್ಲಿ ತಮ್ಮ ಜಾಗತಿಕ ನಾಯಕತ್ವದ ಅಂಚನ್ನು ಉಳಿಸಿಕೊಳ್ಳಲು ದೊಡ್ಡ ಪ್ರಮಾಣದಲ್ಲಿ ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಬೇಕು ಎಂದು ಹೇಳಿದರು.
ನಾವು ಹೆಚ್-1 ಬಿ ವೀಸಾಗಳಿಗೆ ಅವಲಂಬಿತರಾಗಿದ್ದೇವೆ ಎಂದು ಹೇಳುವುದು ತಪ್ಪು. ಉದಾಹರಣೆಗೆ ಕಳೆದ 10 ವರ್ಷಗಳಲ್ಲಿ, ಪ್ರತಿವರ್ಷ ಸುಮಾರು 65,000 ಹೆಚ್-1ಬಿ ವೀಸಾಗಳನ್ನು ನೀಡಲಾಗುತ್ತಿತ್ತು. ಅಂದರೆ ಅದರರ್ಥ 10 ವರ್ಷಗಳಲ್ಲಿ ನೀಡಲಾದ ವೀಸಾ ಸಂಖ್ಯೆ 6,50,000. ಸಾಮೂಹಿಕವಾಗಿ ಲಕ್ಷಾಂತರ ಜನರಿಗೆ ಉದ್ಯೋಗ ದೊರಕಿದೆ.
ಇನ್ಫೋಸಿಸ್ ವೊಂದರಲ್ಲಿಯೇ 2,00,000 ಉದ್ಯೋಗಿಗಳಿದ್ದಾರೆ. ಟಿಸಿಎಸ್ ನಲ್ಲಿ ಸುಮಾರು 4 ಲಕ್ಷ ಉದ್ಯೋಗಿಗಳು, ಹೀಗೆ ಇತರ ಕಂಪೆನಿಗಳಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ನೇಮಕಗೊಂಡಿದ್ದಾರೆ. ಭಾರತೀಯ ಐಟಿ ಕಂಪೆನಿಗಳು ಹೆಚ್-1 ಬಿ ವೀಸಾವನ್ನು ಅವಲಂಬಿಸಿವೆ ಎಂಬ ಭಾವನೆ ಸರಿಯಲ್ಲ ಎಂದು ಸಿಕ್ಕಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಕಳೆದೊಂದು ದಶಕದಲ್ಲಿ ಹೆಚ್-1 ಬಿ ವೀಸಾಗಳ ಬಳಕೆ ಹೆಚ್ಚಾಗಿತ್ತು. ಆದರೆ ಅಂತಿಮವಾಗಿ ಕಂಪೆನಿಯ ಮೌಲ್ಯಗಳನ್ನು ತಲುಪಿಸುವುದರ ಮೇಲೆ ವೀಸಾ ನೀಡಿಕೆ ನಿಂತಿದೆ ಎಂದು ಪ್ರತಿಪಾದಿಸಿದರು.
 ಭಾರತೀಯ ಐಟಿ ಕಂಪೆನಿಗಳು ವಿದೇಶಗಳಲ್ಲಿ ಅದರಲ್ಲೂ ಅಮೆರಿಕಾದಲ್ಲಿ ಒಳ್ಳೆಯ ಹೆಸರು ಗಳಿಸಿವೆ. ಆದರೆ ಆ ಮೌಲ್ಯಗಳು ನಿಧಾನವಾಗಿ ಬದಲಾಗುತ್ತಿವೆ. ಇತ್ತೀಚೆಗೆ ಹೆಚ್ಚಿನ ಕೆಲಸಗಳು ಸ್ವಯಂಚಾಲಿತವಾಗುವುದರಿಂದ ಭಾರತೀಯ ಐಟಿ ಕಂಪೆನಿಗಳು ಹೊಸ ಪ್ರದೇಶಗಳಲ್ಲಿ, ಗಡಿನಾಡಿನ ಪ್ರದೇಶಗಳಲ್ಲಿರುವ ನವೀನ ಪ್ರದೇಶಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಸಿಕ್ಕಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Related Stories

No stories found.

Advertisement

X
Kannada Prabha
www.kannadaprabha.com