ಆರ್ ಟಿಐ ಕಾರ್ಯಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿರುವ ರೈಲ್ವೆ ಇಲಾಖೆ, ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ಕಾಯ್ದಿರಿಸಿದ ಟಿಕೆಟ್ ಗಳ ರದ್ದತಿಯ ಮೂಲಕ ಸಂಗ್ರಹವಾಗಿರುವ ಆದಾಯ ಶೇ.25.29 ರಷ್ಟು ಹೆಚ್ಚಿದೆ ಎಂದು ಹೇಳಿದೆ. 2015-16 ನೆ ಸಾಲಿನಲ್ಲಿ 11.23 ಬಿಲಿಯನ್, 2014-15 ರಲ್ಲಿ 9.38 ಬಿಲಿಯನ್ ನಷ್ಟು ಹಣ ಸಂಗ್ರಹವಾಗಿತ್ತು ಎಂದು ರೈಲ್ವೆ ಇಲಾಖೆಯ ಪ್ಯಾಸೆಂಜರ್ ರಿಸರ್ವೇಷನ್ ಸಿಸ್ಟನ್ (ಪಿಆರ್ ಎಸ್ ) ಅಡಿಯಲ್ಲಿ ಮಾಹಿತಿ ನೀಡಿದೆ.