ದಾಖಲೆ ಬರೆದ ಷೇರು ಮಾರುಕಟ್ಟೆ; 31 ಸಾವಿರ ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್!

ಭಾರತೀಯ ಷೇರುಮಾರುಕಟ್ಟೆ ಸಾರ್ವಕಾಲಿಕ ದಾಖಲೆಗೆ ಸಾಕ್ಷಿಯಾಗಿದ್ದು, ಸೆನ್ಸೆಕ್ಸ್ 31 ಸಾವಿರ ಅಂಕಗಳ ಗಡಿ ದಾಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಭಾರತೀಯ ಷೇರುಮಾರುಕಟ್ಟೆ ಸಾರ್ವಕಾಲಿಕ ದಾಖಲೆಗೆ ಸಾಕ್ಷಿಯಾಗಿದ್ದು, ಸೆನ್ಸೆಕ್ಸ್ 31 ಸಾವಿರ ಅಂಕಗಳ ಗಡಿ ದಾಟಿದೆ.

ಶುಕ್ರವಾರ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದ್ದು, ಮಧ್ಯಾಹ್ನದ ವೇಳೆಗೆ 267.59  ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 31 ಸಾವಿರ ಗಡಿ ದಾಟಿದೆ. ನಿಫ್ಟಿ ಕೂಡ 81.10 ಅಂಕಗಳ  ಏರಿಕೆಯೊಂದಿಗೆ 9,590.90 ಅಂಶಗಳಿಗೆ ಏರಿಕೆಯಾಗಿದ್ದು, ಟಾಟಾ ಸ್ಟೀಲ್‌, ರಿಲಯನ್ಸ್, ಐಸಿಐಸಿಐ ಬ್ಯಾಂಕ್‌ ಮತ್ತು ವೇದಾಂತ ಸಂಸ್ಥೆಗಳು ಹೆಚ್ಚಿನ ಲಾಭಾಂಶ ಕಂಡಿವೆ. ಇದಲ್ಲದೆ ಹಿಂಡಾಲ್ಕೊ, ಭಾರ್ತಿ ಏರ್‌ಟೆಲ್‌, ಏಷ್ಯನ್‌  ಪೇಯಿಂಟ್ಸ್ ಸಂಸ್ಛೆಗಳ ಷೇರುಗಳ ಮೌಲ್ಯ ಕೂಡ ಏರಿಕೆಯಾಗಿದೆ.

ಉಳಿದಂತೆ ಸಿಪ್ಲಾ, ಬಿಪಿಸಿಎಲ್‌, ಎಸ್‌ಬಿಐ, ಸನ್‌ ಫಾರ್ಮಾ, ಬಾಶ್ ಸಂಸ್ಥೆಗಳ ಷೇರುಗಳ ಮೌಲ್ಯದಲ್ಲಿ ಇಳಿಕೆ ಕಂಡುಬಂದಿದೆ. ಪ್ರಮುಖವಾದಿ ಇಂದಿನ ಷೇರುವಹಿವಾಟು ಉತ್ತೇಜನಕ್ಕೆ ಆಟೋ ಮೊಬೈಲ್ ಕ್ಷೇತ್ರದ ಉತ್ತಮ  ಬೆಳವಣಿಗೆ ಹಾಗೂ ವಹಿವಾಟು ಕಾರಣ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಿನ್ನೆಯಷ್ಟೇ ಸೆನ್ಸೆಕ್ಸ್  448.39 ಅಂಕಗಳ ಭರ್ಜರಿ ಏರಿಕೆಯನ್ನು ಸಾಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com