2030 ಅಲ್ಲ.. 2028ಕ್ಕೇ ಭಾರತ ವಿಶ್ವದ 3ನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಲಿದೆ: ವರದಿ

2030 ಅಲ್ಲ..ಇನ್ನೂ 2 ವರ್ಷ ಮುಂಚಿತವಾಗಿಯೇ ಅಂದರೆ 2028ಕ್ಕೇ ಭಾರತ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ 3ನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಲಿದೆ ಎಂದು ವರದಿಯೊಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: 2030 ಅಲ್ಲ..ಇನ್ನೂ 2 ವರ್ಷ ಮುಂಚಿತವಾಗಿಯೇ ಅಂದರೆ 2028ಕ್ಕೇ ಭಾರತ ಜಪಾನ್ ದೇಶವನ್ನು ಹಿಂದಿಕ್ಕಿ ವಿಶ್ವದ 3ನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಲಿದೆ ಎಂದು ವರದಿಯೊಂದು ಹೇಳಿದೆ.
ಅಮೆರಿಕದ ಖ್ಯಾತ ವಿತ್ತ ಸಂಸ್ಥೆ ಬ್ಯಾಂಕ್ ಆಫ್ ಅಮೆರಿಕ ಮೆರಿ ಲಿಂಚ್ ಎಜೆನ್ಸಿ ಈ ಬಗ್ಗೆ ವರದಿ ನೀಡಿದ್ದು, 2028ರ ವೇಳೆಗೆ ಭಾರತ ವಿಶ್ವದ 3ನೇ ಅತಿ ದೊಡ್ಡ ಅರ್ಥ ವ್ಯವಸ್ಥೆಯಾಗಿ ಗುರುತಿಸಿಕೊಳ್ಳಲಿದೆ ಎಂದು ಹೇಳಿದೆ. ಅಂತೆಯೇ  ಈಗಾಗಲೇ ವೇಗವಾಗಿ ಬೆಳೆಯುತ್ತಿರುವ ಭಾರತದ ಅರ್ಥ ವ್ಯವಸ್ಥೆ ರಷ್ಯಾ ಹಾಗೂ ಬ್ರೆಜಿಲ್ ರಾಷ್ಟ್ರಗಳನ್ನು ಹಿಂದಿಕ್ಕಿದ್ದು, ಬ್ರಿಕ್ಸ್ ರಾಷ್ಟ್ರಗಳ ಪಟ್ಟಿಯಲ್ಲಿ ಅಭಿವೃದ್ಧಿ ರಾಷ್ಟ್ರಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ. ಪ್ರಸ್ತುತ ಈ ಪಟ್ಟಿಯಲ್ಲಿ  ಚೀನಾ ಅಗ್ರ ಸ್ಥಾನ ಕಾಯ್ದುಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಪ್ರಮುಖವಾಗಿ ಭಾರತದ ಆರ್ಥಿಕ ನೀತಿಗಳಲ್ಲಿ ಆಗುತ್ತಿರುವ ಬದಲಾವಣೆ, ದಿನೇ ದಿನೇ ಹೆಚ್ಚುತ್ತಿರುವ ಆದಾಯ, ಅರ್ಥ ವ್ಯವಸ್ಥೆ ನಿರ್ದಿಷ್ಠ ಹಾದಿಯಲ್ಲಿ ಸಾಗುತ್ತಿರುವ ಅಂಶವನ್ನು ಪರಿಗಣಿಸಿ ಅಮೆರಿಕ ಬ್ಯಾಂಕ್ ಈ ವರದಿ ನೀಡಿದೆ.  ಮುಂದಿನ ದಶಕದಲ್ಲಿ ಭಾರತದ ಜಿಡಿಪಿ ದರ ಬೆಳವಣಿಗೆಯಲ್ಲಿ ಶೇ.10ರಷ್ಟು ಏರಿಕೆಯಾಲಿದ್ದು, ಶೇ.1.6ರ ಅಂತರದಲ್ಲಿ ಜಪಾನ್ ದೇಶವನ್ನು ಭಾರತ ಹಿಂದಿಕ್ಕಲಿದೆ. ಪ್ರಸ್ತುತ ಆರ್ಥಿಕ ನೀತಿಗಳನ್ನು ಗಮನಿಸಿದರೆ ಅಮೆರಿಕದ ಜಿಡಿಪಿ  ಬೆಳವಣಿಗೆ ಶೇ.7ರಷ್ಟಾಗಲಿದೆ ಎಂದು ಬ್ಯಾಂಕ್ ಆಫ್ ಅಮೆರಿಕ ಮೆರಿ ಲಿಂಚ್ ಎಜೆನ್ಸಿ ವರದಿ ನೀಡಿದೆ.
ಇನ್ನು 2019ರ ವೇಳೆಗೆ ಬ್ರಿಟನ್ ದೇಶ 5ನೇ ಅತೀ ದೊಡ್ಡ ಅರ್ಥ ವ್ಯವಸ್ಥೆ ಹೊಂದಿದ ದೇಶವಾಗಲಿದ್ದು, ಜರ್ಮನಿ ಬಳಿಕದ ಸ್ಥಾನದಲ್ಲಿರಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com