ಜಿಯೋ ಗ್ರಾಹಕರಿಗೆ ಶಾಕ್: ಅನ್ ಲಿಮಿಟೆಡ್ ವಾಯ್ಸ್ ಕಾಲ್ ಗೆ ಬಿತ್ತು ಬ್ರೇಕ್!

ಅನ್ ಲಿಮಿಟೆಡ್ ಕಾಲಿಂಗ್ ಮತ್ತು ಅನ್ ಲಿಮಿಟೆಡ್ ಡಾಟಾ ಆಫರ್ ನೀಡವ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ರಿಲಯನ್ಸ್ ಜಿಯೋ ಸಂಸ್ಥೆ ಇದೀಗ ತನ್ನ ಜನಪ್ರಿಯ ಯೋಜನೆಯಾದ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಗೆ ಬ್ರೇಕ್ ಹಾಕಲು ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಅನ್ ಲಿಮಿಟೆಡ್ ಕಾಲಿಂಗ್ ಮತ್ತು ಅನ್ ಲಿಮಿಟೆಡ್ ಡಾಟಾ ಆಫರ್ ನೀಡವ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ರಿಲಯನ್ಸ್ ಜಿಯೋ ಸಂಸ್ಥೆ ಇದೀಗ ತನ್ನ ಜನಪ್ರಿಯ ಯೋಜನೆಯಾದ ಅನ್  ಲಿಮಿಟೆಡ್ ವಾಯ್ಸ್ ಕಾಲ್ ಗೆ ಬ್ರೇಕ್ ಹಾಕಲು ನಿರ್ಧರಿಸಿದೆ.
ಹೌದು.. ಇನ್ನು ಮುಂದೆ ಜಿಯೋ ಗ್ರಾಹಕರು ಪ್ರತಿನಿತ್ಯ ಕೇವಲ 300 ನಿಮಿಷಗಳ ವರೆಗೆ ಮಾತ್ರ ವಾಯ್ಸ್ ಕಾಲ್ ಮಾಡಬಹುದು..ಇಷ್ಟಕ್ಕೂ ಜಿಯೋ ಸಂಸ್ಥೆಯ ಈ ಕಠಿಣ ನಿರ್ಧಾರಕ್ಕೆ ಕಾರಣ ಕೇಳಿದರೆ ಅಚ್ಚರಿಯಾಗುತ್ತದೆ. ಕೆಲ  ಜಿಯೋ ಗ್ರಾಹಕರು ಸಂಸ್ಥೆಯ ಈ ಆಫರ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ. ವೈಯುಕ್ತಿಕ ಬಳಕೆ ನೀಡಲಾಗಿದ್ದ ಈ ಸೇವೆಯನ್ನು ಮುಂದಿಟ್ಟುಕೊಂಡು ಕೆಲ ಖಾಸಗಿ ಸಂಸ್ಥೆಗಳು ತಮ್ಮ  ವಾಣಿಜ್ಯಾತ್ಮಕ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಿವೆಯಂತೆ.

ಅನ್ ಲಿಮಿಟೆಡ್ ಕಾಲಿಂಗ್ ಸೇವೆಯನ್ನು ಪಡೆದ ಈ ಖಾಸಗಿ ಸಂಸ್ಥೆಗಳು ತಮ್ಮ ಉತ್ಪನ್ನಗಳು ಮತ್ತು ತಮ್ಮ ಸಂಸ್ಥೆಯ ಯೋಜನೆಗಳನ್ನು ದೂರವಾಣಿ ಕರೆಗಳ ಮೂಲಕ ಪ್ರಚಾರ ಮಾಡುತ್ತಿವೆಯಂತೆ. ಇದೇ ಕಾರಣಕ್ಕೆ ಇಂತಹ  ವಂಚಕ ನಡೆಯನ್ನು ತಪ್ಪಿಸುವ ಉದ್ದೇಶದಿಂದಲೇ ಜಿಯೋ ಸಂಸ್ಥೆ ಈ ಕಠಿಣ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಸಂಸ್ಥೆಯ ಈ ನಿರ್ಧಾರದಿಂದಾಗಿ ಜಿಯೋ ಗ್ರಾಹಕ ಪ್ರತೀ ತಿಂಗಳು (28 ದಿನಗಳು) 3000 ನಿಮಿಷಗಳಷ್ಟು ಕರೆಗಳನ್ನು  ಮಾತ್ರ ಮಾಡಬಹುದು. ಅಂದರೆ ಪ್ರತೀ ನಿತ್ಯ 300 ನಿಮಿಷದಂತೆ ಅಥವಾ 7 ದಿನಕ್ಕೆ 1200 ನಿಮಿಷಗಳಷ್ಟು ಮಾತ್ರ ಕರೆ ಮಾಡಬಹುದಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಯೋ ಸಂಸ್ಥೆಯ ವಕ್ತಾರರು, ಈ ನಿರ್ಧಾರ ಹೊಸದೇನೂ ಅಲ್ಲ. ಈ ಹಿಂದೆಯೇ ನಿರ್ಧರಿಸಲಾಗಿತ್ತು. ಸಂಸ್ಥೆಯ ಯಾವುದೇ ಯೋಜನೆಯನ್ನು ದುರುಪಯೊಗ ಪಡಿಸಿಕೊಂಡರೆ ಸೇವೆಯನ್ನೇ  ಸ್ಥಗಿತಗೊಳಿಸುವ ಅಧಿಕಾರ ಸಂಸ್ಥೆಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com