ಉ.ಕೊರಿಯಾದಿಂದ ಹೈಡ್ರೋಜನ್‌ ಬಾಂಬ್‌ ಬೆದರಿಕೆ: ಸೆನ್ಸೆಕ್ಸ್ 457 ಅಂಕ ಕುಸಿತ

ಉತ್ತರ ಕೊರಿಯಾ ಮತ್ತೊಂದು ಹೈಡ್ರೋಜನ್‌ ಬಾಂಬ್‌ ಪರೀಕ್ಷೆ ನಡೆಸುವುದಾಗಿ ಬೆದರಿಕೆ ಹಾಕಿದ್ದರಿಂದ ಶ್ವಾದ್ಯಂತ ಷೇರು ಮಾರುಕಟ್ಟೆಗಳು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಮುಂಬೈ: ಉತ್ತರ ಕೊರಿಯಾ ಮತ್ತೊಂದು ಹೈಡ್ರೋಜನ್‌ ಬಾಂಬ್‌ ಪರೀಕ್ಷೆ ನಡೆಸುವುದಾಗಿ ಬೆದರಿಕೆ ಹಾಕಿದ್ದರಿಂದ ಶ್ವಾದ್ಯಂತ ಷೇರು ಮಾರುಕಟ್ಟೆಗಳು ನಲುಗಿ ಹೋಗಿದ್ದು, ಶುಕ್ರವಾರದ ಮಧ್ಯಾಹ್ನದ ವಹಿವಾಟಿನಲ್ಲಿ ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್‌ 400ಕ್ಕೂ ಅಧಿಕ ಅಂಕಗಳ ಕುಸಿತ ಕಂಡಿದೆ.
ಬ್ಯಾಂಕಿಂಗ್‌, ಹಣಕಾಸು, ಕ್ಯಾಪಿಟಲ್‌ ಗೂಡ್ಸ್‌ ವಲಯದ ಷೇರುಗಳು ತೀವ್ರ ಮಾರಾಟದ ಒತ್ತಡಕ್ಕೆ ಗುರಿಯಾದವು. ಪರಿಣಾಮ ರಾಷ್ಟ್ರೀಯ ಷೇರ ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,000ಕ್ಕಿಂತ ಕೆಳ ಮಟ್ಟಕ್ಕೆ ಜಾರಿ 9,977.10 ಅಂಕಗಳ ಮಟ್ಟಕ್ಕೆ ಕುಸಿಯಿತು.
'ಉತ್ತರ ಕೊರಿಯವನ್ನುನಿರ್ನಾಮ ಮಾಡುವುದು ನಮಗೆ ಕಷ್ಟದ ಕೆಲಸವೇನೂ ಅಲ್ಲ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ ಬೆನ್ನಿಗೇ ಉತ್ತರ ಕೊರಿಯ, ತಾನು ಶಾಂತ ಸಾಗರದಲ್ಲಿ ಮತ್ತೊಂದು ಹೈಡ್ರೋಜನ್‌ ಬಾಂಬ್‌ ಪರೀಕ್ಷೆಯನ್ನು ಕೈಗೊಳ್ಳುವುದಾಗಿ ಬೆದರಿಕೆ ಹಾಕಿತು. 
ಈ ಮಧ್ಯೆ ಡಾಲರ್‌ ಎದುರು ಕುಸಿದ ರುಪಾಯಿ ಮೌಲ್ಯ 4 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದು ಷೇರು ಮಾರುಕಟ್ಟೆಗೆ ಆಘಾತ ನೀಡಿದೆ.
ವಾರದ ಕೊನೇ ದಿನವಾದ ಇಂದು ಸೆನ್ಸೆಕ್ಸ್‌ 457.99 ಅಂಕಗಳ ನಷ್ಟದೊಂದಿಗೆ 31,912.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತಾದರೆ, ನಿಫ್ಟಿ 161.05 ಅಂಕಗಳ ನಷ್ಟದೊಂದಿಗೆ 9,960.85 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ನಿರಾಶಾದಾಯಕವಾಗಿ ಮುಗಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com