ವಾಣಿಜ್ಯ

ಮನೆ ಬಜೆಟ್ ನ್ನು ಸರ್ಕಾರಿ ಬಜೆಟ್ ನೊಂದಿಗೆ ಹೋಲಿಸುವುದು ತಪ್ಪು: ನೀತಿ ಆಯೋಗ

ಬಜೆಟ್ ನಲ್ಲಿ ಸಮತೋಲನ ಕಾಯ್ದುಕೊಳ್ಳಲು ಹಣಕಾಸಿನ ಕೊರತೆಗಳನ್ನು ಕಡಿಮೆ ಮಾಡಿಕೊಳ್ಳುವ ಯುರೋಪ್ ಪ್ರಣೀತ ಆರ್ಥಿಕ ಸಂಪ್ರದಾಯವನ್ನು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್...

ಮನೆ ಬಜೆಟ್ ನ್ನು ಸರ್ಕಾರಿ ಬಜೆಟ್ ನೊಂದಿಗೆ ಹೋಲಿಸುವುದು ತಪ್ಪು: ನೀತಿ ಆಯೋಗ
ನೀತಿ ಆಯೋಗ
Published On :
ನವದೆಹಲಿ: ಬಜೆಟ್ ನಲ್ಲಿ ಸಮತೋಲನ ಕಾಯ್ದುಕೊಳ್ಳಲು ಹಣಕಾಸಿನ ಕೊರತೆಗಳನ್ನು ಕಡಿಮೆ ಮಾಡಿಕೊಳ್ಳುವ ಯುರೋಪ್ ಪ್ರಣೀತ ಆರ್ಥಿಕ ಸಂಪ್ರದಾಯವನ್ನು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಳ್ಳಿಹಾಕಿದ್ದು, ಸರ್ಕಾರದ ಖರ್ಚುಗಳಿಗೆ ಹೊಸ ವ್ಯಾಖ್ಯಾನಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. 
ಇದೇ ವೇಳೆ ಮನೆ ಬಜೆಟ್ ಗೆ ರಾಷ್ಟ್ರದ ಬಜೆಟ್ ಗಳನ್ನು ಹೋಲಿಕೆ ಮಾಡುವುದು ತರ್ಕಬದ್ಧವಲ್ಲ ಎಂದೂ ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.  ಸಿಐಐ ನ ವಾರ್ಷಿಕ ಸೆಷನ್ ನಲ್ಲಿ ಮಾತನಾಡಿರುವ ರಾಜೀವ್ ಕುಮಾರ್, ನೀತಿ ಆಯೋಗ ಸಾರ್ವಜನಿಕ ಖರ್ಚುಗಳನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.
ಖಾಸಗಿ ಹೂಡಿಕೆ ಕಡಿಮೆಯಾಗಿ, ಉದ್ಯೋಗ ಸೃಷ್ಟಿಯಾಗಬೇಕಿದ್ದರೆ ಸರ್ಕಾರ ಮಧ್ಯಪ್ರವೇಶ ಮಾಡುವುದು ಅನಿವಾರ್ಯ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.