ಫೆಬ್ರವರಿ 2018ರಲ್ಲಿ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ವರದಿಯ ಪ್ರಕಾರ ಫ್ಯಾಕ್ಟರಿಔಟ್ ಪುಟ್ ನಲ್ಲಿ ಶೇ.1.2ರಷ್ಟು ಏರಿಕೆಯಾಗಿದೆ. ಕಳೆದ ನವೆಂಬರ್, ಡಿಸೆಂಬರ್ ಹಾಗೂ ಜನವರಿಯಲ್ಲಿ ಐಪಿಐ ಬೆಳವಣಿಗೆ ದರವು ಕ್ರಮವಾಗಿ ಶೇ.8.54, ಶೇ.7.1, ಶೇ.7.4ರಷ್ಟಿತ್ತು. ಇದೇ ವೇಳೆ ಕಳೆದ ವರ್ಷದ ಏಪ್ರಿಲ್ ವೇಳೆಗೆ ಐಐಪಿ ಬೆಳವಣಿಗೆ ಶೇ 4..7ರಿಂದ ಶೇ 4.3ರಷ್ಟಿತ್ತು ಎಂದು ಕೇಂದ್ರ ಅಂಕಿಅಂಶಗಳ ಕಚೇರಿ (ಸಿ.ಎಸ್.ಓ) ವರದಿ ಮಾಡಿದೆ.