2018ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ. 7.3ರಷ್ಟಾಗಲಿದೆ: ವಿಶ್ವಬ್ಯಾಂಕ್ ಭವಿಷ್ಯ

ನೋಟು ನಿಷೇಧ, ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ತರಾತುರಿಯ ಜಾರಿಯಿಂದಾಗಿ ಹಿನ್ನಡೆ ಅನುಭವಿಸಿದ್ದ ಭಾರತದ ಆರ್ಥಿಕ ಬೆಳವಣಿಗೆ ದರ 2018ರಲ್ಲಿ...
ನರೇಂದ್ರ ಮೋದಿ
ನರೇಂದ್ರ ಮೋದಿ
ವಾಷಿಂಗ್ಟನ್: ನೋಟು ನಿಷೇಧ, ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ತರಾತುರಿಯ ಜಾರಿಯಿಂದಾಗಿ ಹಿನ್ನಡೆ ಅನುಭವಿಸಿದ್ದ ಭಾರತದ ಆರ್ಥಿಕ ಬೆಳವಣಿಗೆ ದರ 2018ರಲ್ಲಿ ಪುಟಿದೇಳಲಿದ್ದು ಶೇ. 7.3ರಷ್ಟಾಗಲಿದೆ ಎಂದು ವಿಶ್ವಬ್ಯಾಂಕ್ ಭವಿಷ್ಯ ನುಡಿದಿದೆ. 
ಅದೇ ರೀತಿ 2019 ಮತ್ತು 2020ರ ವೇಳೆಗೆ ಭಾರತದ ಆರ್ಥಿಕ ಬೆಳವಣಿಗೆ ಶೇಕಡ 7.5ರಷ್ಟಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮುನ್ಸೂಚನೆ ನೀಡಿದೆ. 
ದಕ್ಷಿಣ ಏಷ್ಯಾದ ಆರ್ಥಿಕತೆಯನ್ನು ಕೇಂದ್ರೀಕರಿಸಿ ವಿಶ್ವಬ್ಯಾಂಕ್ ವರದಿ ನೀಡಿದ್ದು ಆ ಪ್ರಕಾರ 2017ರಲ್ಲಿ 6.7ರಷ್ಟಿದ್ದ ಭಾರತದ ಆರ್ಥಿಕ ಬೆಳವಣಿಗೆ 2018ರಲ್ಲಿ 7.3ಕ್ಕೆ ಏರಿಕೆಯಾಗಲಿದೆ. ಖಾಸಗಿ ಹೂಡಿಕೆ ಮತ್ತು ಖಾಸಗೀ ಬಳಕೆಯಲ್ಲಿ ನಿರಂತರವಾದ ಚೇತರಿಕೆಯಿಂದಾಗಿ ಈ ಪ್ರಗತಿ ಸಾಧಿಸಲಿದೆ ಎಂದು ಹೇಳಿದೆ. 
ಜಾಗತಿಕ ಬೆಳವಣಿಗೆಯಲ್ಲಿ ಚೇತರಿಕೆಯ ಲಾಭ ಪಡೆಯಲು ಹೂಡಿಕೆ ಮತ್ತು ರಫ್ತುಗಳನ್ನು ವೇಗಗೊಳಿಸಲು ಭಾರತ ಶ್ರಮಿಸಬೇಕು ಎಂದು ವಿಶ್ವಬ್ಯಾಂಕ್ ಸಲಹೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com