ಊರ್ಜಿತ್ ಪಟೇಲ್ ರಾಜಿನಾಮೆ ಬೆನ್ನಲ್ಲೇ ರೂಪಾಯಿ ಮೌಲ್ಯ ಕುಸಿತ!

ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದ ಊರ್ಜಿತ್ ಪಟೇಲ್ ರಾಜಿನಾಮೆ ಬೆನ್ನಲ್ಲೇ ಭಾರತೀಯ ರೂಪಾಯಿ ಮೌಲ್ಯ ಕುಸಿತಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದ ಊರ್ಜಿತ್ ಪಟೇಲ್ ರಾಜಿನಾಮೆ ಬೆನ್ನಲ್ಲೇ ಭಾರತೀಯ ರೂಪಾಯಿ ಮೌಲ್ಯ ಕುಸಿತಗೊಂಡಿದೆ.
ನಿನ್ನೆಯಷ್ಟೇ ಅಮೆರಿಕನ್ ಡಾಲರ್ ಎದುರು 50 ಪೈಸೆಯಷ್ಟು ಕುಸಿತಕಂಡಿದ್ದ ರೂಪಾಯಿ ಮೌಲ್ಯ ಇಂದು ಮತ್ತೆ 61 ಪೈಸೆಗಳಷ್ಟು ಕುಸಿತಕಂಡಿದೆ. ಆ ಮೂಲಕ ಕೇವಲ 2 ದಿನಗಳ ಅಂತರದಲ್ಲಿ ರೂಪಾಯಿ ಮೌಲ್ಯ 1.11 ಪೈಸೆಗಳಷ್ಚು ಕುಸಿತಗೊಂಡಿದೆ.
ಕೇಂದ್ರ ಸರ್ಕಾರ ಮತ್ತು ಆರ್ ಬಿಐ ತಿಕ್ಕಾಟದಿಂದಾಗಿ ಬೇಸತ್ತು ನಿನ್ನೆಯಷ್ಟೇ ಆರ್ ಬಿಐ ಗವರ್ನರ್ ಆಗಿದ್ದ ಊರ್ಜಿತ್ ಪಟೇಲ್ ಅವರು ರಾಜಿನಾಮೆ ನೀಡಿದ್ದರು. ಊರ್ಜಿತ್ ಪಟೇಲ್ ವೈಯುಕ್ತಿಕ ಕಾರಣ ನೀಡಿ ರಾಜಿನಾಮೆ ನೀಡಿದ್ದರೂ ಅವರ ರಾಜಿನಾಮೆ ಹಿಂದೆ ಕೇಂದ್ರ ಸರ್ಕಾರದ ಪಾತ್ರದ ಕುರಿತು ಊಹಾಪೋಹಗಳು ಕೇಳಿಬರುತ್ತಿವೆ.
ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿರುವಂತೆ ಮುಂದಿನ ಕೆಲ ದಿನಗಳ ಕಾಲ ರೂಪಾಯಿ ಮೌಲ್ಯ ಮತ್ತಷ್ಟು ಕುಸಿತವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com