ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಗ್ರಾಹಕರ ವಿತ್ ಡ್ರಾ ಮಿತಿ ಹೆಚ್ಚಿಸಿದ ಆರ್ ಬಿಐ

ಮುಂಬೈನ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರ ವಿತ್​​​ ಡ್ರಾ ಮಾಡುವ ಹಣದ ಮಿತಿಯನ್ನು ರಿಸರ್ವ್....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಮುಂಬೈನ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರ ವಿತ್​​​ ಡ್ರಾ ಮಾಡುವ ಹಣದ ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 5 ಸಾವಿರ ರುಪಾಯಿಗೆ ಹೆಚ್ಚಿಸಿದೆ.
ಸಹಕಾರಿ ಬ್ಯಾಂಕ್ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ ನಲ್ಲಿ ಆರ್ ಬಿಐ ವಿತ್ ಡ್ರಾ ಮಿತಿಯನ್ನು 1 ಸಾವಿರ ರುಪಾಯಿಗೆ ಮಿತಿಗೊಳಿಸಿತ್ತು.
ಈಗ ಬ್ಯಾಂಕ್ ಹಣಕಾಸಿನ ಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಎಸ್ ಬಿ ಅಕೌಂಟ್ ಅಥವಾ ಚಾಲ್ತಿ ಖಾತೆ ಹೊಂದಿರುವವರ ವಿತ್ ಡ್ರಾ ಮಿತಿಯನ್ನು 5 ಸಾವಿರ ರುಪಾಯಿಗೆ ಹೆಚ್ಚಿಸಲಾಗಿದೆ ಎಂದು ಆರ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಆರ್ ಬಿಐ ಅನುಮತಿ ಇಲ್ಲದೆಯೇ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಯಾವುದೇ ಸಾಲ ನೀಡುವುದು, ಮುಂಗಡ ಹಣ ನೀಡುವುದು ಅಥವಾ ಹೂಡಿಕೆ ಮಾಡುವುದಕ್ಕೆ ಅವಕಾಶ ಇಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com