ಕೇಂದ್ರ ಬಜೆಟ್ ಪರಿಣಾಮ: ಸೆನ್ಸೆಕ್ಸ್ 500 ಅಂಕಗಳ ಇಳಿಕೆ, ಸತತ 2ನೇ ದಿನವೂ ಷೇರುಮಾರುಕಟ್ಟೆ ಕುಸಿತ

ಕೇಂದ್ರ ಬಜೆಟ್ ಘೋಷಣೆಯಾದ 2ನೇ ದಿನವೇ ಮತ್ತೆ ಸೆನ್ಸೆಕ್ಸ್ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಶುಕ್ರವಾರ ಮತ್ತೆ ಸೆನ್ಸೆಕ್ಸ್ 500ಕ್ಕೂ ಹೆಚ್ಚು ಅಂಕಗಳ ಕುಸಿತ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಕೇಂದ್ರ ಬಜೆಟ್ ಘೋಷಣೆಯಾದ 2ನೇ ದಿನವೇ ಮತ್ತೆ ಸೆನ್ಸೆಕ್ಸ್ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಶುಕ್ರವಾರ ಮತ್ತೆ ಸೆನ್ಸೆಕ್ಸ್ 500ಕ್ಕೂ ಹೆಚ್ಚು ಅಂಕಗಳ ಕುಸಿತ ಕಂಡಿದೆ.
ನಿನ್ನೆಯಷ್ಟೇ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು 2018 ಮತ್ತು 2019ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದರು. ಇದರ ಬೆನ್ನಲ್ಲೇ ಸೆನ್ಸೆಕ್ಸ್ 480ಕ್ಕೂ ಹೆಚ್ಚು ಅಂಕಗಳ ಕುಸಿತ ಕಂಡಿತ್ತು. ಇದೀಗ ಸತತ 2ನೇ ದಿನವೂ ಸೆನ್ಸೆಕ್ಸ್  ಕುಸಿತ ಕಂಡಿದ್ದು, ಇಂದು ಬರೊಬ್ಬರಿ 500 ಅಂಕಗಳ ಕುಸಿತ ಕಾಣುವ ಮೂಲಕ 35,339.70ಅಂಕಗಳಿಗೆ ಕುಸಿದಿದೆ. ಆ ಮೂಲಕ ಭಾರತೀಯ ಷೇರುಮಾರುಕಟ್ಟೆ ಭಾರಿ ಹಿನ್ನಡೆ ಅನುಭವಿಸಿದೆ. ಕೇವಲ 2 ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್  ಬರೊಬ್ಬರಿ 900ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿದ್ದು, ಇದಕ್ಕೆ ಕೇಂದ್ರ ಬಜೆಟ್ ನ ವ್ಯತಿರಿಕ್ತ ಪರಿಣಾಮವೇ ಕಾರಣ ಎಂದು ಹೇಳಲಾಗುತ್ತಿದೆ. 
ಸೆನ್ಸೆಕ್ಸ್ ಮಾತ್ರವಲ್ಲದೇ ನಿಫ್ಟಿ ಕೂಡ 158.05 ಅಂಕಗಳಷ್ಟು ಕುಸಿತ ಕಂಡಿದ್ದು, 10,858.85 ಅಂಕಳಿಗೆ ಕುಸಿದಿದೆ. ನಿನ್ನೆಯ ಕೇಂದ್ರ ಬಜೆಟ್ ಹಾಗೂ ಏಷ್ಯನ್ ಮಾರುಕಟ್ಟೆಗಳ ನೀರಸ ವಹಿವಾಟು ಸೆನ್ಸೆಕ್ಸ್ ವಹಿವಾಟು ಕುಸಿತಕ್ಕೆ ಕಾರಣ  ಎಂದು ಹೇಳಲಾಗುತ್ತಿದೆ. ಇನ್ನು ಇಂದಿನ ವಹಿವಾಟಿನಲ್ಲಿ ಬ್ಲೂಚಿಪ್ ಕಂಪನಿಗಳ ಷೇರು ಮೌಲ್ಯ ಭಾರಿ ಕುಸಿತ ಕಂಡಿದ್ದು, ಪ್ರಮುಖವಾಗಿ ಹೆಚ್ ಡಿಎಫ್ ಸಿ, ಹೆಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್,  ಎಲ್ ಅಂಡ್ ಟಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಮಾರುತಿ ಸುಜುಕಿ, ಇಂಡಸ್ ಇಂಡ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಸ್ ಬಿಐ ಮತ್ತು ಒಎನ್ ಜಿಸಿ ಸಂಸ್ಥೆಗಳಿಗೆ ಭಾರಿ ನಷ್ಟವಾಗಿದ್ದು, ಈ ಸಂಸ್ಥೆಗಳ ಷೇರು ಮೌಲ್ಯದಲ್ಲಿ ಕುಸಿತ  ಕಂಡುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com