ಬಜೆಟ್ ವ್ಯತಿರಿಕ್ತ ಪರಿಣಾಮ; ಸತತ ಮೂರನೇ ದಿನವೂ ಸೆನ್ಸೆಕ್ಸ್ ಕುಸಿತ

2018-19ನೇ ಸಾಲಿನ ಕೇಂದ್ರ ಬಜೆಟ್ ಕುರಿತ ವ್ಯತಿರಿಕ್ತ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಮೇಲೆ ಮುಂದುವರೆದ್ದು, ಸೆನ್ಸೆಕ್ಸ್ ಬರೊಬ್ಬರಿ 546 ಅಂಕಗಳ ಕುಸಿತ ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: 2018-19ನೇ ಸಾಲಿನ ಕೇಂದ್ರ ಬಜೆಟ್ ಕುರಿತ ವ್ಯತಿರಿಕ್ತ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಮೇಲೆ ಮುಂದುವರೆದ್ದು, ಸೆನ್ಸೆಕ್ಸ್ ಬರೊಬ್ಬರಿ 546 ಅಂಕಗಳ ಕುಸಿತ ಕಂಡಿದೆ.
ಇಂದು ವಹಿವಾಟು ಆರಂಭದಿಂದಲೇ ಷೇರುಮಾರುಕಟ್ಟೆ ನಕಾರಾತ್ಮಕ ವಹಿವಾಟು ಆರಂಭಿಸಿದ್ದು, ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ ಬರೊಬ್ಬರಿ 546 ಅಂಕಗಳ ಇಳಿಕೆ ಕಂಡು  34,520.80. ಅಂಕಗಳಿಗೆ ಕುಸಿದಿದೆ. ಕಳೆದ  ಬುಧವಾರವಷ್ಟೇ ದಾಖಲೆ 36 ಸಾವಿರ ಅಂಕಗಳಿಗೇರಿದ್ದ ಸೆನ್ಸೆಕ್ಸ್ ಕೇವಲ 3 ದಿನಗಳಲ್ಲಿ ಬರೊಬ್ಬರಿ 1500 ಅಂಕಗಳಷ್ಟು ಕುಸಿತ ಕಂಡಿದೆ. ಕಳೆದ ನಾಲ್ಕು ವಹಿವಾಟುಗಳಲ್ಲಿ ಸೆನ್ಸೆಕ್ಸ್ 1,216.50 ಅಂಕಗಳ ಕಳೆದುಕೊಂಡಿದ್ದು, ಸುಮಾರು  ಶೇ.10ರಷ್ಟು ನಷ್ಟ ಅನುಭವಿಸಿದೆ.
ಇಂದಿನ ವಹಿವಾಟಿನಲ್ಲಿ ನಿಫ್ಟಿ ಕೂಡ ಬರೊಬ್ಬರಿ 173.80 ಅಂಕಗಳ ಕುಸಿತ ಕಾಣುವ ಮೂಲಕ 10,586.80 ಅಂಕಗಳಿಗೆ ಕುಸಿದಿದೆ. ಉಕ್ಕು, ರಿಯಲ್ ಎಸ್ಟೇಟ್, ಕ್ಯಾಪಿಟಲ್ ಗೂಡ್ಸ್, ಬ್ಯಾಂಕಿಂಗ್ ಮತ್ತು ಇಂಧನ, ಗ್ಯಾಸ್ ಕ್ಷೇತ್ರಗಳ  ಷೇರುಗಳಿಗೆ ಭಾರಿ ನಷ್ಟವಾಗಿದ್ದು, ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಯೆಸ್ ಬ್ಯಾಂಕ್, ಹೆಚ್ ಡಿಎಫ್ ಸಿ ಲಿಮಿಟೆಡ್, ಎಸ್ ಬಿಐ, ಆಕ್ಸಿಸ್ ಬ್ಯಾಂಕ್, ಹೀರೋ ಮೋಟೋಕಾರ್ಪ್, ಬಜಾಜ್ ಆಟೋ, ಟಾಟಾ ಸ್ಟೀಲ್,  ಹಿಂದೂಸ್ತಾನ್ ಯೂನಿಲಿವರ್, ಎಲ್ ಅಂ್ ಟಿ, ಎಂ ಅಂಡ್ ಎಮ್, ಅದಾನಿ ಪೋರ್ಟ್, ಕೋಟಕ್ ಬ್ಯಾಂಕ್ ಮತ್ತು ಆರ್ ಐಎಲ್ ಸಂಸ್ಥೆಗಳ ಷೇರುಮೌಲ್ಯದಲ್ಲಿ ಶೇ.3.36ರಷ್ಟು ಕುಸಿತ ಕಂಡಿದೆ.
ಇಂಧನ ದರ ಏರಿಕೆ, ಏಷ್ಯನ್ ಮಾರುಕಟ್ಟೆಯಲ್ಲಿನ ನೀರಸ ಪ್ರತಿಕ್ರಿಯೆ ಮತ್ತು ಕೇಂದ್ರ ಬಜೆಟ್ ನ ಪರಿಣಾಮ ಮಾರುಕಟ್ಟೆ ಮೇಲೆ ನಾಳೆಯೂ ಮುಂದುವರೆಯಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ಜಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com