ಸಂಗ್ರಹ ಚಿತ್ರ
ವಾಣಿಜ್ಯ
ಷೇರುಪೇಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 1,213 ಅಂಕಗಳ ಕುಸಿತ!
ಭಾರತೀಯ ಷೇರುಮಾರುಕಟ್ಟೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದ್ದು, ಬಜೆಟ್ ಮಂಡನೆ ಬಳಿಕ ಇಳಿಮುಖವಾಗಿ ವ್ಯವಹಸಿರುತ್ತಿದ್ದ ಸೆನ್ಸೆಕ್ಸ್ ಮಂಗಳವಾರ ಬರೊಬ್ಬರಿ 1213 ಅಂಕಗಳ ಕುಸಿತ ಕಂಡಿದೆ.
ಮುಂಬೈ: ಭಾರತೀಯ ಷೇರುಮಾರುಕಟ್ಟೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದ್ದು, ಬಜೆಟ್ ಮಂಡನೆ ಬಳಿಕ ಇಳಿಮುಖವಾಗಿ ವ್ಯವಹಸಿರುತ್ತಿದ್ದ ಸೆನ್ಸೆಕ್ಸ್ ಮಂಗಳವಾರ ಬರೊಬ್ಬರಿ 1213 ಅಂಕಗಳ ಕುಸಿತ ಕಂಡಿದೆ.
ಇಂದಿನ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ನಲ್ಲಿ ರಕ್ತಪಾತವಾಗಿದ್ದು, ಬರೊಬ್ಬರಿ 1213 ಅಂಕಗಳ ಕುಸಿತದೊಂದಿಗೆ 33,543.20 ಅಂಕಗಳಿಗೆ ಇಳಿಕೆಯಾಗಿದೆ. ಇದು ಆರು ವರ್ಷಗಳ ಹಿಂದಿನ ಕನಿಷ್ಚ ಪ್ರಮಾಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ ಬರೊಬ್ಬರಿ ಶೇ.3.49ರಷ್ಟು ನಷ್ಟ ಅನುಭವಿಸಿದ್ದು, ನಿಫ್ಟಿ ಕೂಡ 376 ಅಂಕಗಳ ಕುಸಿತ ಕಂಡು 24, 773.5 ಅಂಕಗಳಿಗೆ ಇಳಿಕೆಯಾಗಿದೆ.
ನಿನ್ನೆಯಷ್ಟೇ ಸೆನ್ಸೆಕ್ಸ್ ಸೂಚ್ಯಂಕ ವಹಿವಾಟನ್ನು 310 ಅಂಕಗಳ ನಷ್ಟ ದೊಂದಿಗೆ 34,757.16 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತ್ತು.
ಇನ್ನು ಇಂದಿನ ಮಾರುಕಟ್ಟೆ ಕುಸಿತಕ್ಕೆ ಅಮೆರಿಕ ಮಾರುಕಟ್ಟೆಯ ಪತನವೇ ಕಾರಣ ಎಂದು ಹೇಳಲಾಗುತ್ತಿದ್ದು, ಅಮೆರಿಕ ಷೇರುಪೇಟೆಯಲ್ಲಿ ಕಳೆದ 2 ವಹಿವಾಟಿನಲ್ಲಿ 2500ಕ್ಕೂ ಅಧಿಕ ಅಂಕಗಳ ಪತನವಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ