ವಿಶ್ವದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ: ವರದಿ

ವಿಶ್ವದ ಸಿರಿವಂತ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಆರನೇ ಸ್ಥಾನ ನೀಡಲಾಗಿದೆ ಎಂದು ವರದಿಯೊಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ವಿಶ್ವದ ಸಿರಿವಂತ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಆರನೇ ಸ್ಥಾನ ನೀಡಲಾಗಿದೆ ಎಂದು ವರದಿಯೊಂದು ಹೇಳಿದೆ.
‘ನ್ಯೂ ವರ್ಲ್ಡ್‌ ವೆಲ್ತ್‌’ ವರದಿ ಪ್ರಕಾರ ಭಾರತೀಯರ ಒಟ್ಟು ಖಾಸಗಿ ಸಂಪತ್ತು  ರೂ.534 ಲಕ್ಷ ಕೋಟಿಗಳಿಗೇರಿದ್ದು, ಆ ಮೂಲಕ ಭಾರತ ವಿಶ್ವದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಕಳೆದ ವರ್ಷ ಭಾರತ 7ನೇ  ಸ್ಥಾನದಲ್ಲಿತ್ತು. ಇನ್ನು ಈ ಬಾರಿಯೂ ವಿಶ್ವದ ದೊಡ್ಡಣ್ಣ ಅಮೆರಿಕ ಮೊದಲ ಸ್ಥಾನದಲ್ಲಿ ಇದ್ದು, ಅಮೆರಿಕದ ಬಳಿ 64,584 ಡಾಲರ್ ಖಾಸಗಿ ಸಂಪತ್ತು ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.
ವರದಿಯಲ್ಲಿರುವಂತೆ ಸಂಪತ್ತಿನ ಮಾರುಕಟ್ಟೆಯಲ್ಲಿ ಭಾರತದ ಸಾಧನೆ ಅತ್ಯುತ್ತಮವಾಗಿದ್ದು, 2016ರಲ್ಲಿ ಭಾರತದ ಬಳಿ ರೂ. 427 ಲಕ್ಷ ಕೋಟಿ ಖಾಸಗಿ ಸಂಪತ್ತು ಇತ್ತು. ಬಳಿಕ 2017ರಲ್ಲಿ ಭಾರತ ಶೇ 25ರಷ್ಟು ಏರಿಕೆ ದಾಖಲಿಸಿದೆ.  ವ್ಯಕ್ತಿಗಳ ಖಾಸಗಿ ಸಂಪತ್ತು ಆಧರಿಸಿ ಈ ಸ್ಥಾನಮಾನ ನಿಗದಿ ಮಾಡಲಾಗಿದ್ದು, ಈ ಸಂಪತ್ತಿನ ಲೆಕ್ಕದಲ್ಲಿ ಆಸ್ತಿ, ನಗದು, ಷೇರು, ವಹಿವಾಟು ಪರಿಗಣಿಸಲಾಗಿದೆ. ಸಾಲದ ಮೊತ್ತವನ್ನು ಈ ಸಂಪತ್ತಿನ ಲೆಕ್ಕದಿಂದ ಹೊರಗೆ ಇಡಲಾಗಿದೆ.  ಜತೆಗೆ ಸರ್ಕಾರದ ನಿಧಿಗಳನ್ನೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎನ್ನಲಾಗಿದೆ.
ಭಾರತದಲ್ಲಿ ರೂ.6.50 ಕೋಟಿ ಅಥವಾ ಇದಕ್ಕಿಂತ ಹೆಚ್ಚಿನ ಮೊತ್ತದ ಸಂಪತ್ತು ಹೊಂದಿದವರ ಸಂಖ್ಯೆ 3.30 ಲಕ್ಷ ಇದ್ದು, ಈ ಮಾನದಂಡದ ಪ್ರಕಾರ ಭಾರತ 9ನೇ ಸ್ಥಾನದಲ್ಲಿ ಇದೆ. 20,730 ಕೋಟ್ಯಧಿಪತಿಗಳು ಭಾರತದಲ್ಲಿ  (7ನೆ ಸ್ಥಾನ) ಇದ್ದಾರೆ. ಇನ್ನು ಭಾರತದ ಈ ಸಾಧನೆಯಲ್ಲಿ ಭಾರತೀಯ ಷೇರುಮಾರುಕಟ್ಟೆಯ ಕೊಡುಗೆ ಕೂಡ ಇದ್ದು, ಜನರ ವೈಯಕ್ತಿಕ ಸಂಪತ್ತು ಹೆಚ್ಚಳದಲ್ಲಿ ಷೇರುಪೇಟೆಯ ಕೊಡುಗೆ ಪ್ರಮುಖವಾಗಿದೆ. ಷೇರುಪೇಟೆಯಲ್ಲಿನ ಗರಿಷ್ಠ  ವಹಿವಾಟಿನ ಕಾರಣಕ್ಕೆ ಕಳೆದ ಒಂದು ವರ್ಷದಲ್ಲಿ ಭಾರತ, ಅಮೆರಿಕ, ಚೀನಾ, ಜಪಾನ್‌ ಮತ್ತು ಆಸ್ಟ್ರೇಲಿಯಾದ ಶ್ರೀಮಂತರ ಸಂಪತ್ತು ಗಮನಾರ್ಹ ಏರಿಕೆ ಕಂಡಿದೆ.
2007 ರಿಂದ 2017ರ ಒಂದು ದಶಕದ ಅವಧಿಯಲ್ಲಿ ಭಾರತದಲ್ಲಿ ವ್ಯಕ್ತಿಗತ ಸಂಪತ್ತು ರೂ.205 ಲಕ್ಷ ಕೋಟಿಗಳಿಂದ ರೂ. 534 ಲಕ್ಷ ಕೋಟಿಗಳಿಗೆ ಏರಿಕೆಯಾಗಿ ಶೇ. 160ರಷ್ಟು ಹೆಚ್ಚಳ ಕಂಡಿದೆ. ಈ ಅವಧಿಯಲ್ಲಿ ಚೀನಾದ ಸಂಪತ್ತು ಶೇ  22ರಷ್ಟು ಮತ್ತು ಜಾಗತಿಕ ಸಂಪತ್ತು ಶೇ 12ರಷ್ಟು ಏರಿಕೆ ಕಂಡಿದೆ.
2017ರಲ್ಲಿ ಗಣನೆಗೆ ತೆಗೆದುಕೊಂಡ ಸಂಪತ್ತು ಆಧರಿಸಿ ಹೇಳುವುದಾದರೆ, ಅಮೆರಿಕದ ಸಂಪತ್ತು 4,197 ಲಕ್ಷ ಕೋಟಿಗಳಷ್ಟಿದ್ದು, ನಂತರದ ಸ್ಥಾನದಲ್ಲಿ ಚೀನಾ (24,803 ಬಿಲಿಯನ್ ಡಾಲರ್), ಜಪಾನ್‌ (19,522 ಬಿಲಿಯನ್  ಡಾಲರ್), ಬ್ರಿಟನ್ ( 9,919 ಬಿಲಿಯನ್ ಡಾಲರ್)‌, ಜರ್ಮನಿ ( 9,660 ಬಿಲಿಯನ್ ಡಾಲರ್)‌ ದೇಶಗಳಿವೆ. ಭಾರತ ನಂತರದ ಸ್ಥಾನದಲ್ಲಿ ಇದ್ದು, ಭಾರತದ ನಂತರದ ಸ್ಥಾನದಲ್ಲಿ ಫ್ರಾನ್ಸ್‌ (6,649 ಬಿಲಿಯನ್ ಡಾಲರ್)‌ ದೇಶವಿದೆ.  ಕೆನಡಾ (6,393 ಬಿಲಿಯನ್ ಡಾಲರ್)‌ 8ನೇ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ (6,142 ಬಿಲಿಯನ್ ಡಾಲರ್)‌ ಮತ್ತು ಇಟಲಿ (4,276 ಬಿಲಿಯನ್ ಡಾಲರ್)‌ ನಂತರದ ಸ್ಥಾನಗಳಲ್ಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com