ಈ ಬಗ್ಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದ್ದು, ಭಾರತದ ವಾಣಿಜ್ಯ ಸಚಿವಾಲಯ ಹೊರಡಿಸುವ ಸುಂಕ ದರ ಪಟ್ಟಿಯಲ್ಲಿ ಆ್ಯಪಲ್, ಆಲ್ಮಂಡ್ (ಬಾದಾಮಿ), ಚಿಕ್ ಪೀಸ್, ಲೆಂಟಿಲ್, ವಾಲ್ ನಟ್, ಆರ್ಟೆಮಿಯಾ ಇತ್ಯಾದಿ ಉತ್ಪನ್ನಗಳನ್ನು ಹೆಸರಿಸಿ ಅವುಗಳ ಮೇಲಿನ ಆಮದು ತೆರಿಗೆಯನ್ನು ಹೆಚ್ಚಿಸಿದೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅಂತೆಯೇ ಭಾರತ ಕೆಲವೊಂದು ವರ್ಗಗಳ ಕಬ್ಬಿಣ ಮತ್ತು ಉಕ್ಕು ಉತ್ಪನ್ನಗಳ ಮೇಲಿನ ಸುಂಕವನ್ನು ಕೂಡ ಏರಿಕೆ ಮಾಡಿದೆ.