ಜೆಟ್ ಏರ್ ವೇಸ್ ನಿಂದ ಟಿಕೆಟ್ ದರದಲ್ಲಿ ಶೇ.30ರಷ್ಟು ರಿಯಾಯಿತಿ

ಖ್ಯಾತ ವಿಮಾನಯಾನ ಸಂಸ್ಥೆ ಜೆಟ್ ಏರ್ ವೇಸ್ ಗ್ರಾಹಕರಿಗೆ ಈಸ್ಟರ್ ಕೊಡುಗೆ ನೀಡಿದ್ದು, ಈಸ್ಟರ್ ರಿಯಾಯಿತಿ ಮಾರಾಟ ಹಿನ್ನಲೆಯಲ್ಲಿ ನಿಗದಿತ ವಿಮಾನಯಾನ ಪ್ರಯಾಣದ ದರದಲ್ಲಿ ಶೇ.30ರವೆರಗೂ ರಿಯಾಯಿತಿ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಖ್ಯಾತ ವಿಮಾನಯಾನ ಸಂಸ್ಥೆ ಜೆಟ್ ಏರ್ ವೇಸ್ ಗ್ರಾಹಕರಿಗೆ ಈಸ್ಟರ್ ಕೊಡುಗೆ ನೀಡಿದ್ದು, ಈಸ್ಟರ್ ರಿಯಾಯಿತಿ ಮಾರಾಟ ಹಿನ್ನಲೆಯಲ್ಲಿ ನಿಗದಿತ ವಿಮಾನಯಾನ ಪ್ರಯಾಣದ ದರದಲ್ಲಿ ಶೇ.30ರವೆರಗೂ ರಿಯಾಯಿತಿ ಘೋಷಣೆ ಮಾಡಿದೆ.
ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಜೆಟ್ ಏರ್ ವೇಸ್ ಸಂಸ್ಥೆ ಈಸ್ಟರ್ ರಿಯಾಯಿತಿ ಮಾರಾಟ ಘೋಷಣೆ ಮಾಡಿದ್ದು, ಮಾರ್ಚ್30ರಿಂದ ಏಪ್ರಿಲ್ 2ರವರೆಗೂ  ಅಂದರೆ ನಾಲ್ಕು ದಿನಗಳ ಕಾಲ ವಿಶೇಷ ರಿಯಾಯಿತಿ ಘೋಷಿಸಿದೆ. ನಿಗದಿ ಪಡಿಸಿದ ಮಾರ್ಗಗಳಲ್ಲಿ ಸಂಚರಿಸುವ ವಿಮಾನಗಳ ಪ್ರಯಾಣ ದರದಲ್ಲಿ ಶೇ.30 ರಷ್ಟು ರಿಯಾಯಿತಿ ನೀಡಿದ್ದು, ಈ ಮಾರ್ಗಗಳಲ್ಲಿ ಕೆಲ ಅಂತಾರಾಷ್ಟ್ರೀಯ ಮತ್ತು ದೇಶದ 45 ಪ್ರಮುಖ ನಗರಗಳು ಒಳಗೊಂಡಿವೆ.
ಪ್ರೀಮಿಯರ್ ಮತ್ತು ಎಕಾನಮಿ ಎರಡೂ ವರ್ಗಗಳಲ್ಲಿ ಈ ರಿಯಾಯಿತಿ ಲಭ್ಯವಿದ್ದು, ಅಂತಾರಾಷ್ಟೀಯ ಪ್ರಯಾಣದ ಟಿಕೆಟ್ ಮೂಲದರದ ಮೇಲೆ ಶೇ.30ರಷ್ಟು ರಿಯಾಯಿತಿ ದೊರೆಯಲಿದೆ.
ಅಂತಾರಾಷ್ಟ್ರೀಯ ಪ್ರಯಾಣದ ವಿಶೇಷ ದರಗಳು ಎರಡೂ ವರ್ಗದ ಪ್ರಯಾಣಕ್ಕೆ ಒಂದೇ ತೆರನಾಗಿದ್ದು, ವಾಪಸ್ ಬರುವ ಟಿಕೆಟ್ ದರಗಳ ಬೆಲೆಗಳಿಗೂ ಇದು ಅನ್ವಯಲಾಗುತ್ತದೆ. ಭಾರತದಿಂದ ದುಬೈ, ಅಬುಧಾಬಿ, ಶಾರ್ಜಾ, ಬಹ್ರೇನ್, ದೋಹಾ, ಡಮ್ಮಮ್, ಕುವೈತ್, ರಿಯಾದ್, ಜೆಡ್ಡಾ, ಮಸ್ಕಟ್, ಕಠ್ಮಂಡು, ಢಾಕಾ, ಹಾಂಕಾಂಗ್, ಸಿಂಗಾಪುರ, ಬ್ಯಾಂಕಾಕ್, ಆಮ್ಸರ್ಡಾಮ್, ಪ್ಯಾರಿಸ್, ಲಂಡನ್ ಮತ್ತು ಟೊರೊಂಟೊಗೆ ಪ್ರಯಾಣ ಬೆಳೆಸುವ ಗ್ರಾಹಕರು ಬಳಸಿಕೊಳ್ಳಬಹುದು. 
ದೇಶೀಯ ಪ್ರಯಾಣದಲ್ಲಿ ಪ್ರೀಮಿಯರ್ ಟಿಕೆಟ್ ಬುಕ್ಕಿಂಗ್ ಗೆ ಶೇ.20ರಷ್ಟು ಮತ್ತು ಎಕಾನಮಿ ಟಿಕೆಟ್ ಬುಕ್ಕಿಂಗ್ ಗೆ ಶೇ.10 ರಿಯಾಯಿತಿ ದೊರೆಯಲಿದೆ. ಇದು ಒನ್ ವೇ ಜರ್ನಿಗೆ ಮಾತ್ರ ಅನ್ವಯವಾಗಲಿದೆ. ಈ ಟಿಕೆಟ್ ಗಳು ಖರೀದಿ ಮಾಡಿದ ದಿನಾಂಕದಿಂದ ಸೆಪ್ಟೆಂಬರ್ 30, 2018ರವರೆಗೂ ಮಾತ್ರ ಚಾಲ್ತಿಯಲ್ಲಿರುತ್ತದೆ ಎಂದು ಜೆಟ್ ಏರ್ ವೇಸ್ ಸಂಸ್ಥೆ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com