ನವದೆಹಲಿ: ದೇಶಾದ್ಯಂತ ನಿತ್ಯ ತೈಲ ಬೆಲೆಗಳನ್ನು ಪರಿಷ್ಕರಿಸಲಾಗುತ್ತಿದ್ದು, ಇಂದೂ ಸಹ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುವ ಮೂಲಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಕಳೆದ 4 ವರ್ಷಗಳಲ್ಲಿಯೇ ಅತಿ ಹೆಚ್ಚಿನ ಬೆಲೆ ತಲುಪಿದೆ. ಡೀಸೆಲ್ ಬೆಲೆ ಸಹ ಹೊಸ ದಾಖಲೆ ಬರೆದಿದೆ.
ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 18 ಪೈಸೆ ಏರಿಕೆಯಾಗುವುದರೊಂದಿಗೆ 73.73 ರು. ತಲುಪಿದೆ. ಡೀಸೆಲ್ ಬೆಲೆಯೂ 26 ಪೈಸೆ ಹೆಚ್ಚಳವಾಗುವುದರೊಂದಿಗೆ ಸಾರ್ವಕಾಲಿಕ ದಾಖಲೆ ಬರೆದಿದ್ದು,
2014ರ ಸೆಪ್ಟಂಬರ್ 14 ರಂದು ಪೆಟ್ರೋಲ್ ಲೀಟರ್ ಗೆ 76.06 ರು. ಆಗಿತ್ತು. ನಂತರದಲ್ಲಿ ಇದಕ್ಕಿಂತ ಕಡಿಮೆ ಬೆಲೆ ಇತ್ತಾದರೂ, ಇಷ್ಟೊಂದು ದುಬಾರಿ ಆಗಿರಲಿಲ್ಲ. ಭಾನುವಾರ 73.73 ರು. ತಲುಪುವುದರೊಂದಿಗೆ ಪೆಟ್ರೋಲ್ ಬೆಲೆ 4 ವರ್ಷಗಳಲ್ಲೇ ಅತಿ ಹೆಚ್ಚಿನ ಬೆಲೆ ದಾಖಲಿಸಿದೆ.
ಅದೇ ರೀತಿ ಡೀಸೆಲ್ ಬೆಲೆ ಲೀಟರ್ ಗೆ 64.22 ರೂ. ತಲುಪಿದ್ದು ಇದುವರೆಗಿನ ದಾಖಲೆಯಾಗಿತ್ತು. ಈಗ ಲೀಟರ್ 64.58 ರೂ. ತಲುಪುವುದರೊಂದಿಗೆ ಹೊಸ ದಾಖಲೆ ಬರೆದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತವಾದಂತೆ ದೇಶೀಯ ಮಾರುಕಟ್ಟೆಯಲ್ಲಿ ತೈಲ ಕಂಪನಿಗಳು ಬೆಲೆ ಏರಿಳಿತ ಮಾಡುತ್ತವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾದಾಗಲು ದೇಶಿಯವಾಗಿ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ಸಿಕ್ಕಿರಲಿಲ್ಲ. ಅರುಣ್ ಜೇಟ್ಲಿ ಕೇಂದ್ರ ಹಣಕಾಸು ಸಚಿವರಾದ ಬಳಿಕ ಬರೋಬ್ಬರಿ 9 ಸಲ ಅಬಕಾರಿ ಸುಂಕ ಏರಿಕೆ ಮಾಡಲಾಗಿದೆ.