ಆರ್ ಬಿಐ ನಿಂದ ಸೌತ್ ಇಂಡಿಯನ್ ಬ್ಯಾಂಕ್ ಗೆ 5 ಕೋಟಿ ರೂ. ದಂಡ

ಆಸ್ತಿ ವರ್ಗೀಕರಣ ಸಂಬಂಧ ಅನುವರ್ತನೆಗಾಗಿ ಅನುವರ್ತನೆ, ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ಬಗೆಗಿನ ಮಾನದಂಡಗಳಲ್ಲಿನ ಲೋಪಕ್ಕಾಗಿ ಭಾರತೀಯ ರಿಸರ್ವ್.....
ಆರ್ ಬಿಐ ನಿಂದ ಸೌತ್ ಇಂಡಿಯನ್ ಬ್ಯಾಂಕ್ ಗೆ 5 ಕೋಟಿ ರೂ. ದಂಡ
ಆರ್ ಬಿಐ ನಿಂದ ಸೌತ್ ಇಂಡಿಯನ್ ಬ್ಯಾಂಕ್ ಗೆ 5 ಕೋಟಿ ರೂ. ದಂಡ
Updated on: 
ಮುಂಬೈ: ಆಸ್ತಿ ವರ್ಗೀಕರಣ ಸಂಬಂಧ ಅನುವರ್ತನೆಗಾಗಿ ಅನುವರ್ತನೆ, ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ಬಗೆಗಿನ ಮಾನದಂಡಗಳಲ್ಲಿನ ಲೋಪಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್ ಗೆ 5 ಕೋಟಿ ರೂ. ದಂಡ ವಿಧಿಸಿದೆ.
"ವರಮಾನ ಹಂಚಿಕೆ, ಮತ್ತು ಸ್ವತ್ತು ವರ್ಗೀಕರಣ ಮಾನದಂಡಗಳು,  ಕೆವೈಸಿ ಮಾನದಂಡಗಳು ಮತ್ತು ಖಜಾನೆಯ ಕಾರ್ಯಚಟುವಟಿಕೆ ಮತ್ತು ಅದರ ಅನುಸರಣೆ ಕಾರ್ಯ ಮತ್ತು ಕೊರತೆ ಕಾರಣಕ್ಕಾಗಿ ಬ್ಯಾಂಕ್ ಮೇಲೆ  ದಂಡ ವಿಧಿಸಲಾಗಿದೆ ಎಂದು ಆರ್ ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬ್ಯಾಂಕ್ ಗೆ ದಂಡ ವಿಧಿಸಿದ ಕ್ರಮವು ಬ್ಯಾಂಕ್ ವ್ಯವಹಾರ ಹಾಗೂ ಅದು ಗ್ರಾಹಕರೊಡನೆ ಮಾಡಿಕೊಂಡಿರುವ ಒಪ್ಪಂದದ ಮಾನ್ಯತೆಯನ್ನು ಉಲ್ಲಂಘಿಸುವ ಉದ್ದೇಶವನ್ನು ಹೊಂದಿಲ್ಲ  ಎನ್ನುವುದಾಗಿ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.
ಇಂದಿನ ವಹಿವಾಟಿನಲ್ಲಿ ಬಿಎಸ್ ಇ ನಲ್ಲಿ ಖಾಸಗಿ ಕ್ಷೇತ್ರದ ಷೇರುಗಳು 25.60 ರೂ.ಕುಸಿತ ಕಂಡಿದೆ. ಇದು ಒಟ್ಟಾರೆ ಶೇ. 2.66 ಪ್ರಮಾಣದಲ್ಲಿ ಮುಕ್ತಾಯ ಕಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com