ಪೆಟ್ರೋಲ್ ನ ಮೂಲ ಬೆಲೆ ಮತ್ತು ಸರ್ಕಾರದ ತೆರಿಗೆ ಎಷ್ಟು ಗೊತ್ತಾ?

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಶುಕ್ರವಾರ ದೆಹಲಿಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಶುಕ್ರವಾರ ದೆಹಲಿಯಲ್ಲಿ ಪೆಟ್ರೋಲ್​ ದರ ಮತ್ತೆ 48 ಪೈಸೆ ಏರಿಕೆಯಾಗುವ ಮೂಲಕ ಪ್ರತಿ ಲೀಟರ್ ಗೆ 79.99 ರು.ಗಳಿಗೆ ಮಾರಾಟವಾಗುತ್ತಿದೆ.
ತೈಲ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರದ ಭಾರಿ ತೆರಿಗೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯೆ ಕಾರಣವಾಗಿದೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐಒಸಿ) ಸೆಪ್ಟೆಂಬರ್ 3ರಂದು ನೀಡಿದ ಮಾಹಿತಿಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ಮೂಲ ಬೆಲೆ 39.21 ರುಪಾಯಿ ಆಗಿದ್ದು, ಇದರ ಮೇಲೆ ಸರ್ಕಾರ 19.48 ರುಪಾಯಿ ಅಬಕಾರಿ ಸುಂಕ, 3.63 ರುಪಾಯಿ ಡೀಲರ್ ಕಮಿಷನ್ ಹಾಗೂ 16.83 ರುಪಾಯಿ ವ್ಯಾಟ್ ಸೇರಿ ಒಟ್ಟು 39.94 ರುಪಾಯಿ ತೆರೆ ವಿಧಿಸುತ್ತದೆ. 
ಮತ್ತೊಂದು ಕಡೆ, ಮುಂಬೈನಲ್ಲಿ ಪೆಟ್ರೋಲ್ ಬೆಲೆ 87.39 ರುಪಾಯಿ ಮತ್ತು ಡೀಸೆಲ್ ಬೆಲೆ 76.51 ರುಪಾಯಿಗೆ ಮಾರಾಟವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com