ಬೆಂಗಳೂರಿನಲ್ಲಿ ಐಫೋನ್ 7 ಉತ್ಪಾದನಾ ಘಟಕ ಶೀಘ್ರ ಪ್ರಾರಂಭ: ಆಪಲ್ ಘೋಷಣೆ
ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಸೇರಿದಂತೆ ಭಾರತದಲ್ಲಿ ಕೈಗಾರಿಕೋತ್ಪಾದನೆ ಯೋಜನೆಗೆ ಉತ್ತೇಜನ ನೀಡುವ ಹಿನ್ನೆಲೆ ಆಪಲ್ ಕಂಪನಿ ಬೆಂಗಳೂರಿನಲ್ಲಿನ ತನ್ನ ಪೂರೈಕೆದಾರ ವಿಸ್ಟ್ರಾನ್ಸ್....
ನವದೆಹಲಿ: ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಸೇರಿದಂತೆ ಭಾರತದಲ್ಲಿ ಕೈಗಾರಿಕೋತ್ಪಾದನೆ ಯೋಜನೆಗೆ ಉತ್ತೇಜನ ನೀಡುವ ಹಿನ್ನೆಲೆ ಆಪಲ್ ಕಂಪನಿ ಬೆಂಗಳೂರಿನಲ್ಲಿನ ತನ್ನ ಪೂರೈಕೆದಾರ ವಿಸ್ಟ್ರಾನ್ಸ್ ಜತೆಸೇರಿ ಐಫೋನ್ 7 ಉತ್ಪಾದನೆ ಪ್ರಾರಂಭಿಸಲು ಯೋಜಿಸಿದೆ. ತೈವಾನ್ ಮೂಲದ ಸಂಸ್ಥೆಯಾಗಿರುವ ವಿಸ್ಟ್ರಾನ್ಸ್ ಇದಾಗಲೇ ಆಪಲ್ ಐಫೋನ್ 6S ದೇಶವ್ಯಾಪಿ ಪೂರೈಕೆಯ ಹೊಣೆ ಹೊತ್ತಿದೆ.ಇದೀಗ ಆಪಲ್ ಸಂಸ್ಥೆ ಐಫೋನ್ 7 ಅನ್ನು ಬೆಂಗಳೂರಿನಲ್ಲೇ ಉತ್ಪಾದಿಸುವುದಾಗಿ ಘೋಷಿಸಿದೆ.
"ಭಾರತದಲ್ಲಿ ನಮ್ಮ ಸ್ಥಳೀಯ ಗ್ರಾಹಕರ ಜತೆ ನಮ್ಮ ದೀರ್ಘಾವಧಿಯ ಬದ್ಧತೆಯನ್ನು ಹೆಚ್ಚಿಸಲು ನಾವು ಐಫೋನ್ 7 ಅನ್ನು ಬೆಂಗಳೂರಿನಲ್ಲಿ ಉತ್ಪಾದಿಸಲು ನಿರ್ಧರಿಸಿದ್ದೇವೆ" ಆಪಲ್ ಮಂಗಳವಾರ ತಿಳಿಸಿದೆ.
ಐಫೋನ್ 7 ಉತ್ಪಾದನೆ ಯೋಜನೆ ಕಳೆದ ತಿಂಗಳು ಪ್ರಾರಂಬವಾಗಿದ್ದು ಕರ್ನಾಟಕದ ಕೋಲಾರ ಜಿಲ್ಲೆಯನರಸಾಪುರ ಕೈಗಾರಿಕಾ ವಲಯದಲ್ಲಿ ಕಳೆದ ವರ್ಷ 3 ಸಾವಿರ ಕೋಟಿ ರೂ ಹೂಡಿಕೆಯಲ್ಲಿ ವಿಸ್ಟ್ರಾನ್, ಆಪಲ್ ಸಂಯೋಜನೆಯಲ್ಲಿ ಕಡಿಮೆ ದರ್ಜೆಯ ಐಫೋನ್ SE ಮತ್ತು ಐಫೋನ್ 6S ಅನ್ನು ಉತ್ಪಾದಿಸಲು ಯೋಜನೆ ರಚನೆಯಾಗಿತ್ತು.
ಕಂಪನಿಯು 43 ಎಕರೆ ಭೂಮಿಯಲ್ಲಿ ಉತ್ಪಾದನಾ ಘಟಕ ಸ್ಥಾಪನೆ ಮಾಡಲಿದೆ.10,000 ಕ್ಕಿಂತ ಹೆಚ್ಚು ಜನ ಇದರಿಂದ ಉದ್ಯೋಗ ಪಡೆಯಲಿದ್ದಾರೆ ಎಂದು ವಿಸ್ಟ್ರಾನ್ಸ್ ಇಂಡಿಯಾ ಮುಖ್ಯಸ್ಥ ಗುರುರಾಜ್ ಎ. ಹೇಳಿದ್ದಾರೆ.
ಆಪಲ್ ಭಾರತದಲ್ಲಿ ನಿಧಾನವಾಗಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಗುರಿ ಹಾಕಿಕೊಂಡಿದೆ.ಗಿ 450 ದಶಲಕ್ಷಕ್ಕೂ ಹೆಚ್ಚಿನ ಜನರು ಸ್ಮಾರ್ಟ್ ಪೋನ್ ಬಳಸುತ್ತಿರುವ ಈ ದೇಶದಲ್ಲಿ ತನ್ನ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಆಪಲ್ ಯೋಜಿಸಿದೆ. ಬೆಂಗಳೂರಿನಲ್ಲಿ ಐಫೋನ್ 7 ಉತ್ಪಾದನೆ ಈ ಯೋಜನೆಯ ಇನ್ನೊಂದು ಭಾಗವಾಗಿದೆ. ಒಂದೊಮ್ಮೆ ಭಾರತದಲ್ಲೇ ಐಫೋನ್ ಉತ್ಪಾದನೆಯಾದರೆ "ಐಫೋನ್ ದುಬಾರಿ" ಎಂಬ ಕಾಲ ಹೊರಟು ಹೋಗಿ ಸಾಮಾನ್ಯ ಜನರೂ ಐಫೋನ್ ಬಳಕೆ ಮಾಡುವಂತಾಗಲಿದೆ ಎಂದು ವಿಶ್ಲೇಷಿಸಲಾಗಿದೆ.