ಕೇಂದ್ರದಿಂದ 12 ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ 48,239 ಕೋಟಿ ರೂ. ಹೂಡಿಕೆ!

ಕೇಂದ್ರ ಸರ್ಕಾರ ಮರು ಬಂಡವಾಳ ಕ್ರೋಡೀಕರಣಕ್ಕಾಗಿ 12 ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ 48,239 ಕೋಟಿ ರೂ. ತೊಡಗಿಸಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಕೇಂದ್ರ ಸರ್ಕಾರ ಮರು ಬಂಡವಾಳ ಕ್ರೋಡೀಕರಣಕ್ಕಾಗಿ 12 ಸಾರ್ವಜನಿಕ ವಲಯದ ಬ್ಯಾಂಕ್‍ಗಳಲ್ಲಿ 48,239 ಕೋಟಿ ರೂ. ತೊಡಗಿಸಲು ಮುಂದಾಗಿದೆ.
48,239 ಕೋಟಿ ರೂ. ಪೈಕಿ, ಕಾರ್ಪೋರೇಷನ್‍ ಬ್ಯಾಂಕ್‍ 9,086 ಕೋಟಿ ರೂ. ಗರಿಷ್ಟ ಮೊತ್ತ ಪಡೆಯಲಿದೆ. ಮರು ಬಂಡವಾಳ ಕ್ರೋಡೀಕರಣಕ್ಕಾಗಿ ಅಲಹಾಬಾದ್ ಬ್ಯಾಂಕ್‍ 6,896 ಕೋಟಿ ರೂ. ಪಡೆಯಲಿದೆ ಎಂದು ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಬ್ಯಾಂಕ್‍ ಆಫ್‍ ಇಂಡಿಯಾ 4,638 ಕೋಟಿ ರೂ., ಬ್ಯಾಂಕ್‍ ಆಫ್‍ ಮಹಾರಾಷ್ಟ್ರ 205 ಕೋಟಿ ರೂ., ಪಂಜಾಬ್ ನ್ಯಾಷನಲ್‍ ಬ್ಯಾಂಕ್‍ 5,908 ಕೋಟಿ ರೂ. ಯೂನಿಯನ್‍ ಬ್ಯಾಂಕ್‍ 4,112 ಕೋಟಿ ರೂ., ಆಂಧ್ರಾ ಬ್ಯಾಂಕ್‍ 3,256 ಕೋಟಿ ರೂ., ಸಿಂಡಿಕೇಟ್‍ ಬ್ಯಾಂಕ್‍ 1,603 ಕೋಟಿ ರೂ, ಪಡೆಯಲಿವೆ ಎಂದು ರಾಜೀವ್‍ ಕುಮಾರ್ ಟ್ವೀಟ್‍ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com