ಆಯಕಟ್ಟಿನ ತೈಲ ಸಂಗ್ರಹಣೆ : ಸೌದಿ ಅರೇಬಿಯಾ ಹೂಡಿಕೆಗೆ ಭಾರತದ ಆಹ್ವಾನ
ಆಯಕಟ್ಟಿನ ತೈಲ ಸಂಗ್ರಹಣೆ : ಸೌದಿ ಅರೇಬಿಯಾ ಹೂಡಿಕೆಗೆ ಭಾರತದ ಆಹ್ವಾನ

ಆಯಕಟ್ಟಿನ ತೈಲ ಸಂಗ್ರಹಣೆ : ಸೌದಿ ಅರೇಬಿಯಾ ಹೂಡಿಕೆಗೆ ಭಾರತದ ಆಹ್ವಾನ

ಆಯಕಟ್ಟಿನ ತೈಲ ಸಂಗ್ರಹಣೆಯಲ್ಲಿ ಹೂಡಿಕೆಗೆ ಸೌದಿ ಅರೇಬಿವನ್ನು ಭಾರತ ಆಹ್ವಾನಿಸಿದೆ.
ನವದೆಹಲಿ: ಆಯಕಟ್ಟಿನ ತೈಲ ಸಂಗ್ರಹಣೆಯಲ್ಲಿ ಹೂಡಿಕೆಗೆ ಸೌದಿ ಅರೇಬಿವನ್ನು  ಭಾರತ ಆಹ್ವಾನಿಸಿದೆ. 
ಸೌದಿ ಅರೆಬಿಯಾದ ಇಂಧನ ಸಚಿವ ಖಾಲಿದ್ ಅಲ್ ಫಲಿಹ್ ಮೂರು ವಾರಗಳಲ್ಲಿ 2 ನೇ ಬಾರಿ ಭಾರತಕ್ಕೆ ಭೇಟಿ ನೀಡಿದ್ದು, ಭಾರತದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಜೊತೆ ಮಾತುಕತೆ ನಡೆಸಿದ್ದಾರೆ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ವರ್ಷಕ್ಕೆ 60 ಮಿಲಿಯನ್ ಟನ್ (ಎಂಟಿ) ನಷ್ಟು ಸಾಮರ್ಥ್ಯ ಹೊಂದಿರುವ ತೈಲ ಶುದ್ಧೀಕರಣ ಮತ್ತು ಪೆಟ್ರೋಕೆಮಿಕಲ್ ಸಂಕೀರ್ಣವನ್ನು ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ನೀಡಿದ್ದ ಭೂಮಿಯನ್ನು ವಾಪಸ್ ಪಡೆಯಲಾಗಿತ್ತು. ಶಿವಸೇನೆ-ಬಿಜೆಪಿಯ ಚುನಾವಣಾ ಒಪ್ಪಂದ ಸಹ ವಾಪಸ್ ಪಡೆಯುವುದರ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. 
ಸೌದಿ ಅರೆಬಿಯಾ ಇಂಧನ ಸಚಿವರು ಸುಮಾರು 44 ಬಿಲಿಯನ್ ಡಾಲರ್ (3.08 ಕೋಟಿ ರೂಪಾಯಿ) ಯ ಈ ಯೋಜನೆಗೆ ಸಂಬಂಧಿಸಿದಂತೆ ಧರ್ಮೇಂದ್ರ ಪ್ರಧಾನ್ ಜೊತೆಗೆ ಮಾತನಾಡಿದ್ದಾರೆ. 
ಇದೇ ವೇಳೆ ಭಾರತದ ತೈಲ ಹಾಗೂ ಅನಿಲ ಕ್ಷೇತ್ರಗಳಲ್ಲಿ ಸೌದಿ ಅರೇಬಿಯಾ ಹೂಡಿಕೆ ಬಗ್ಗೆ ಇಬ್ಬರೂ ಸಚಿವರು ಮಾತುಕತೆ ನಡೆಸಿದ್ದಾರೆ. ಈ ಪೈಕಿ ಭಾರತ-ಸೌದಿಯ ಮೊದಲ ಜಂಟಿ ಯೋಜನೆಯಾಗಿರುವ ಮಹಾರಾಷ್ಟ್ರದಲ್ಲಿ ಬರಲಿರುವ ವೆಸ್ಟ್ ಕೋಸ್ಟ್ ಶುದ್ಧೀಕರಣ ಹಾಗೂ ಪೆಟ್ರೋಕೆಮಿಕಲ್ ಯೋಜನೆಯನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಲು ಕೈಗೊಳ್ಳಬೇಕಿರುವ ಬಗ್ಗೆ ಇಬ್ಬರೂ ಸಚಿವರು ಚರ್ಚಿಸಿದ್ದಾರೆ. ಈ ಹಿಂದೆ ವಾಪಸ್ ಪಡೆಯಲಾಗಿದ್ದ ಭೂಮಿಗೆ ಬದಲಾಗಿ ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಯೋಜನೆಯಲ್ಲಿ ಶೇ.50 ರಷ್ಟು ಪಾಲನ್ನು ಸೌದಿಯ  ಅರಾಂಕೊ ಹಾಗೂ ಅದರ ಸಹಸಂಸ್ಥೆ ಎಡಿಎನ್ಒಸಿ ಸಹ ಹೊಂದಿರಲಿವೆ. 
ಇದೇ ವೇಳೆ ಭಾರತ ತನ್ನ ತೈಲ ಮೀಸಲು ಸಂಗ್ರಹಣೆಯಲ್ಲಿ ಹೂಡಿಕೆ ಮಾಡಲು ಸೌದಿ ಅರೇಬಿಯಾ ಸರ್ಕಾರವನ್ನು ಆಹ್ವಾನಿಸಿದ್ದಾರೆ. 

Related Stories

No stories found.

Advertisement

X

Advertisement

X
Kannada Prabha
www.kannadaprabha.com