ಭಾರತದ ಮೂಲಭೂತ ಕೈಗಾರಿಕೆ ಉತ್ಪಾದನೆ ಶೇ.4.7ರಷ್ಟು ಏರಿಕೆ

ಸಿಮೆಂಟ್‌ ಮತ್ತು ಕಲ್ಲಿದ್ದಲ್ಲು ಉತ್ಪಾದನೆ ಏರಿಕೆ ಬೆನ್ನಲ್ಲೇ, ಮೂಲಭೂತ ಕೈಗಾರಿಕೆ ಸೂಚ್ಯಂಕ ಮಾರ್ಚ್ 2019ರಲ್ಲಿ ಶೇ.4.7ರಷ್ಟು ಏರಿಕೆಯಾಗಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.

Published: 30th April 2019 12:00 PM  |   Last Updated: 30th April 2019 08:14 AM   |  A+A-


India's infrastructure output improves to 4.7 percent in March

ಸಾಂದರ್ಭಿಕ ಚಿತ್ರ

Posted By : LSB LSB
Source : UNI
ನವದೆಹಲಿ: ಸಿಮೆಂಟ್‌ ಮತ್ತು ಕಲ್ಲಿದ್ದಲ್ಲು ಉತ್ಪಾದನೆ ಏರಿಕೆ ಬೆನ್ನಲ್ಲೇ, ಮೂಲಭೂತ ಕೈಗಾರಿಕೆ ಸೂಚ್ಯಂಕ ಮಾರ್ಚ್ 2019ರಲ್ಲಿ ಶೇ.4.7ರಷ್ಟು ಏರಿಕೆಯಾಗಿದೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.

8 ಕೋರ್‌ ಕೈಗಾರಿಕೆಗಳ ಒಟ್ಟಾರೆ ಸೂಚ್ಯಂಕ 2018-19ರ ಏಪ್ರಿಲ್‌ನಿಂದ ಮಾರ್ಚ್‌ ಅವಧಿಗೆ ಶೇ. 4.32ರಷ್ಟು ಹೆಚ್ಚಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಪ್ರಕಟಣೆ ತಿಳಿಸಿದೆ. 

ಮಾರ್ಚ್‌ 2019ರಲ್ಲಿ ಕಲ್ಲಿದ್ದಲ್ಲು ಉತ್ಪಾದನೆ ಶೇ.9.1ರಷ್ಟು ಏರಿಕೆ ಕಂಡಿದೆ. ಕಚ್ಚಾ ತೈಲ ಉತ್ಪಾದನೆ ಶೇ.6.2ರಷ್ಟು ಕುಸಿದಿದೆ. 2018-19ರ ಅವಧಿಯ ಇದರ ಸಮಗ್ರ ಸೂಚ್ಯಂಕ ಶೇ.4.1ರಷ್ಟು ಇಳಿಕೆಯಾಗಿದೆ.

ಅಡುಗೆ ಅನಿಲ ಉತ್ಪಾದನೆ ಶೇ.1.4ರಷ್ಟು ಏರಿಕೆ ಕಂಡಿದ್ದು, 2018-19ರ ಅವಧಿಯಲ್ಲಿ ಶೇ.0.8ರಷ್ಟು ಪ್ರಗತಿ ಸಾಧಿಸಿದೆ ಎಂದು ಸಚಿವಾಲಯ ಹೇಳಿದೆ.
Stay up to date on all the latest ವಾಣಿಜ್ಯ news with The Kannadaprabha App. Download now
facebook twitter whatsapp