10 ಸಾವಿರ ಉದ್ಯೋಗ ಕಡಿತ ಸುದ್ದಿ ಶುದ್ದ ಸುಳ್ಳು: ಪಾರ್ಲೆ ಜೀ

ಆರ್ಥಿಕ ಹಿಂಜರಿತದ ಹಿನ್ನಲೆಯಲ್ಲಿ ಖ್ಯಾತ ಬಿಸ್ಕಟ್ ಕಂಪನಿ ಪಾರ್ಲೆ ಜೀ 10 ಸಾವಿರಕ್ಕೂ ಅಧಿಕ ಉದ್ಯೋಗಿಗಗಳನ್ನು ತೆಗೆದು ಹಾಕಲಾಗಿದೆ ಎಂಬ ಸುದ್ದಿ ಸುಳ್ಳು ಎಂದು ಪಾರ್ಲೆ ಜೀ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಆರ್ಥಿಕ ಹಿಂಜರಿತದ ಹಿನ್ನಲೆಯಲ್ಲಿ ಖ್ಯಾತ ಬಿಸ್ಕಟ್ ಕಂಪನಿ ಪಾರ್ಲೆ ಜೀ 10 ಸಾವಿರಕ್ಕೂ ಅಧಿಕ ಉದ್ಯೋಗಿಗಗಳನ್ನು ತೆಗೆದು ಹಾಕಲಾಗಿದೆ ಎಂಬ ಸುದ್ದಿ ಸುಳ್ಳು ಎಂದು ಪಾರ್ಲೆ ಜೀ ಹೇಳಿದೆ.

ಉದ್ಯೋಗ ಕಡಿತ ಕುರಿತು ಪಾರ್ಲೆ ಬಿಸ್ಕೆಟ್‌ ಕಂಪೆನಿ ಸ್ಪಷ್ಟೀಕರಣ ನೀಡಿದ್ದು, ಈ ಕುರಿತಂತೆ ಪಾರ್ಲೆ ಸಂಸ್ಥೆಯ ಪಾರ್ಲೆಯ ವಿಭಾಗೀಯ ಮುಖ್ಯಸ್ಥ ಮಾಯಾಂಕ್‌ ಶಾ ಅವರು, 10 ಸಾವಿರಕ್ಕೂ ಅಧಿಕ ಉದ್ಯೋಗಿಗಗಳನ್ನು ತೆಗೆದು ಹಾಕಲಾಗಿದೆ ಎಂಬ ಸುದ್ದಿ ಸುಳ್ಳು.  ನಾವು ಮೊದಲಿನಷ್ಟೇ ಉತ್ಪಾದನೆ ಮಾಡುತ್ತಿದ್ದರೆ ಇಷ್ಟೊಂದು ಪ್ರಮಾಣದ ಉದ್ಯೋಗಿಗಳನ್ನು ನಿರ್ವಹಿಸಲು ಸಮಸ್ಯೆಯಾಗಲಿದೆ ಎಂಬ ಆತಂಕ ನಮ್ಮದು. ಅಲ್ಲದೇ ಈಗ ಬಿಸ್ಕೆಟ್‌ ಗಳಿಗೆ ವಿಧಿಸುತ್ತಿರುವ ಶೇ.18ರಷ್ಟು ತೆರಿಗೆಯಿಂದ ಸಮಸ್ಯೆಯಾಗುತ್ತಿದೆ. ಬಿಸ್ಕೆಟ್ ಗೆ ವಿಧಿಸುವ ತೆರಿಗೆಯನ್ನು ಶೇ.5ಕ್ಕೆ ಇಳಿಸಬೇಕು ಎಂದು ಹೇಳಿದ್ದಾರೆ. 

ಅಂತೆಯೇ ಕೇಂದ್ರದ ತೆರಿಗೆ ನೀತಿಯನ್ನು ವಿರೋಧಿಸಿರುವ ಶಾ, 'ಈ ಮೊದಲು ರಸ್ತೆ ತೆರಿಗೆ ವಿನಾಯ್ತಿ ಇತ್ತು. ಈಗ ಶೇ.5ರಷ್ಟು ತೆರಿಗೆ ಇದೆ. ಸರ್ಕಾರ ಸರಿಯಾದ ಪ್ರಮಾಣದ ತೆರಿಗೆ ವಿಧಿಸಲಿ. ಹೆಚ್ಚು ಪ್ರಮಾಣದ ತೆರಿಗೆಯಿಂದ ಉತ್ಪಾದನೆ ಮೇಲೆ ಹೊಡೆತ ಬೀಳುತ್ತದೆ ಎಂದು ಹೇಳಿದರು.

ಇನ್ನು ಪಾರ್ಲೆ ಏಷ್ಯಾದ ಅತಿ ದೊಡ್ಡ ಬಿಸ್ಕೆಟ್‌ ಉತ್ಪಾದಕ ಕಂಪೆನಿಯಾಗಿದ್ದು, ಕ್ಯಾಮರೂನ್‌, ನೈಜೀರಿಯಾ, ಘಾನಾ, ಇಥೋಪಿಯಾ, ಕೀನ್ಯಾ, ಐವರಿಕೋಸ್ಟ್‌, ನೇಪಾಲ, ಮೆಕ್ಸಿಕೋ ದೇಶಗಳಿಗೂ ರಫ್ತು ಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com