ಬೆಂಗಳೂರು ಮೂಲದ ನಿಂಜಾಕಾರ್ಟ್ ನಲ್ಲಿ ವಾಲ್ ಮಾರ್ಟ್, ಫ್ಲಿಪ್ ಕಾರ್ಟ್ ಹೂಡಿಕೆ

ಅಮೆರಿಕದ ರಿಟೇಲ್‌ ದಿಗ್ಗಜ ವಾಲ್‌ಮಾರ್ಟ್‌ ಹಾಗೂ ಪ್ಲಿಪ್ ಕಾರ್ಟ್ ಜಂಟಿಯಾಗಿ ಬೆಂಗಳೂರು ಮೂಲದ ಬಿಸಿನೆಸ್ 2 ಬಿಸಿನೆಸ್(ಬಿ 2 ಬಿ) ಪೂರೈಕೆ ಕಂಪನಿ ನಿಂಜಾಕಾರ್ಟ್ ನಲ್ಲಿ ಹೂಡಿಕೆ ಮಾಡುವುದಾಗಿ ಬುಧವಾರ ಹೇಳಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಮೆರಿಕದ ರಿಟೇಲ್‌ ದಿಗ್ಗಜ ವಾಲ್‌ಮಾರ್ಟ್‌ ಹಾಗೂ ಪ್ಲಿಪ್ ಕಾರ್ಟ್ ಜಂಟಿಯಾಗಿ ಬೆಂಗಳೂರು ಮೂಲದ ಬಿಸಿನೆಸ್ 2 ಬಿಸಿನೆಸ್(ಬಿ 2 ಬಿ) ಪೂರೈಕೆ ಕಂಪನಿ ನಿಂಜಾಕಾರ್ಟ್ ನಲ್ಲಿ ಹೂಡಿಕೆ ಮಾಡುವುದಾಗಿ ಬುಧವಾರ ಹೇಳಿವೆ.

ದೇಶಾದ್ಯಂತ ಚಿಲ್ಲರೆ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ತಾಜಾ ಉತ್ಪನ್ನಗಳನ್ನು ಪೂರೈಸುವುದು ನಮ್ಮ ಗುರಿಯಾಗಿದೆ ಎಂದು ವಾಲ್ ಮಾರ್ಟ್ ಹಾಗೂ ಫ್ಲಿಪ್ ಕಾರ್ಟ್ ಪ್ರಕಟಣೆಯಲ್ಲಿ ತಿಳಿಸಿವೆ.

ವಾಲ್ ಮಾರ್ಟ್, ಫ್ಲಿಪ್ ಕಾರ್ಟ್ ಹಾಗೂ ನಿಂಜಾಕಾರ್ಟ್ ನಡುವಿನ ಹಣಕಾಸು ವಹಿವಾಟಿನ ಬಗ್ಗೆ ಮೂರು ಕಂಪನಿಗಳು ಯಾವುದೇ ಮಾಹಿತಿ ನೀಡಿಲ್ಲ. ಆದರೆ ನಿಂಜಾಕಾರ್ಟ್ ಜೊತೆಗಿನ ಪಾಲುದಾರಿಕೆ ಚಿಲ್ಲರೆ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದೆ.

ನಮ್ಮ ಈ ಹೂಡಿಕೆಯಿಂದ ನಿಂಜಾ ಕಾರ್ಟ್ ವಹಿವಾಟನ್ನು ದೇಶದ ಇತರೆ ನಗರಗಳಿಗೂ ತಲುಪಿಸಲು ಮತ್ತು ಜಾಗತಿಕ ಮಾನ್ಯತೆ ಪಡೆಯಲು ಸಹಾಯಕವಾಗಲಿದೆ ಎಂದು ಹೇಳಿವೆ.

ಹೊಸ ರೀತಿಯ ಹೈಪರ್ ಲೋಕಲ್ ಗ್ರೋಸರಿ ಡೆಲಿವರಿ ಮಾಡೆಲ್ ಗಳನ್ನು ಅಳವಡಿಸಿಕೊಂಡಿರುವ ನಿಂಜಾ ಕಾರ್ಟ್ ಮೊಬೈಲ್ ಅಪ್ಲಿಕೇಷನ್ ಪ್ರಸ್ತುತ ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತಿದ್ದು, ಹಲವು ಸ್ಟೋರ್ ಗಳ ಮೂಲಕ ಗ್ರಾಹಕರನ್ನು ಸಂಪರ್ಕಿಸಲು ಹಾಗೂ ವೇಗ ಗುಣಮಟ್ಟದ ಸೇವೆ ನೀಡಲು ಯತ್ನಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com