ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಅಮೆಜಾನ್‌ ಜೆಫ್‌ ಬೆಜೋಸ್ ರಿಂದ ಪತ್ನಿಗೆ ವಿಚ್ಛೇದನ

ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಮತ್ತು ಉದ್ಯಮಿ ಅಮೆಜಾನ್‌ ಕಂಪನಿಯ ಸ್ಥಾಪಕ ಜೆಫ್ ಬೆಜೋಸ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತ್ನಿಗೆ ಡಿವೋರ್ಸ್ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನ್ಯೂಯಾರ್ಕ್: ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಮತ್ತು ಉದ್ಯಮಿ ಅಮೆಜಾನ್‌ ಕಂಪನಿಯ ಸ್ಥಾಪಕ ಜೆಫ್ ಬೆಜೋಸ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತ್ನಿಗೆ ಡಿವೋರ್ಸ್ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ಸ್ವತಃ ಅಮೆಜಾನ್ ಸ್ಥಾಪಕ ಜೆಫ್ ಮತ್ತು ಅವರ ಪತ್ನಿ ಮೆಕೆಂಜಿ ಬೆಜೋಸ್ ಬುಧವಾರ ಜಂಟಿಯಾಗಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ನಮ್ಮ ದಾಂಪತ್ಯ ಜೀವನದ ಬೆಳವಣಿಗೆ ಬಗ್ಗೆ ಜನರಿಗೆ ಮಾಹಿತಿ ಇರಲಿ ಎಂದು ಈ ಪೋಸ್ಟ್‌ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. 
ಜೆಫ್‌ ಬೆಜೋಸ್ ಮತ್ತು ಮೆಕೆಂಜಿ ಕಳೆದ 25 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದು, ಈಗಾಗಲೇ ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಇದೀಗ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಇಬ್ಬರೂ ನಿರ್ಧರಿಸಿದ್ದು, ಗೆಳೆಯರಾಗಿರಲು ನಿರ್ಧರಿಸಿದ್ದಾರೆ.  ದಂಪತಿಗಳಾಗಿ ನಾವಿಬ್ಬರೂ ವೈವಾಹಿಕ ಜೀವನವನ್ನು ಸಂತೋಷದಿಂದ ಕಳೆದಿದ್ದೇವೆ ಎಂದು ಜೆಫ್‌ ಮತ್ತು ಮೆಕೆಂಜಿ ತಿಳಿಸಿದ್ದಾರೆ. 
ಜೆಫ್‌ ಬೆಜೋಸ್ ಅಮೆಜಾನ್ ಉದ್ಯಮ ಸಮೂಹ ಹೊಂದಿದ್ದು, ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದಾರೆ. ಜೆಫ್ ಒಟ್ಟು 137 ಬಿಲಿಯನ್ ಡಾಲರ್ (ಅಂದಾಜು 9,67,289 ಕೋಟಿ ರೂ.) ಮೌಲ್ಯದ ಸಂಪತ್ತು ಹೊಂದಿದ್ದಾರೆ. ಅಮೆಜಾನ್ ಆರಂಭದಲ್ಲಿ ಮೆಕೆಂಜಿ ಅಲ್ಲಿ ಉದ್ಯೋಗಿಯಾಗಿದ್ದರು. ನಂತರ 2014ರಲ್ಲಿ ಬೈಸ್ಟಾಂಡರ್ ರಿವೊಲ್ಯೂಶನ್ ಎಂಬ ಸಂಸ್ಥೆ ಆರಂಭಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com