ಅಮೆರಿಕದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಮೂವರು ಭಾರತೀಯ ಮೂಲದ ಮಹಿಳೆಯರು: ಫೋರ್ಬ್ಸ್

ಅಮೆರಿಕಾದ 80 ಅತ್ಯಂತ ಶ್ರೀಮಂತ ಮಹಿಳೆಯರ ಪೈಕಿ ಮೂವರು ಭಾರತೀಯ ಮೂಲದ ಮಹಿಳೆಯರನ್ನು ಫೋರ್ಬ್ಸ್ ಹೆಸರಿಸಿದೆ.
ಅಮೆರಿಕಾದ ಶ್ರೀಮಂತ ಮಹಿಳೆಯರು
ಅಮೆರಿಕಾದ ಶ್ರೀಮಂತ ಮಹಿಳೆಯರು
ವಾಷಿಂಗ್ಟನ್ : ಅಮೆರಿಕಾದ 80 ಅತ್ಯಂತ ಶ್ರೀಮಂತ  ಮಹಿಳೆಯರ ಪೈಕಿ ಮೂವರು ಭಾರತೀಯ ಮೂಲದ ಮಹಿಳೆಯರನ್ನು ಫೋರ್ಬ್ಸ್ ಹೆಸರಿಸಿದೆ.
 ಈ ಮಹಿಳೆಯರು ಹೊಸ ಉದ್ಯಮಗಳನ್ನು ರಚಿಸಿ ತಮ್ಮ ಸ್ವ ಸಾಮರ್ಥ್ಯದಿಂದ  ಅಧಿಕ ಹಣ ಸಂಪಾದಿಸುವ ಮೂಲಕ ಅತ್ಯಂತ ಶ್ರೀಮಂತರ ಮಹಿಳೆಯರು ಎನ್ನಿಸಿಕೊಂಡಿದ್ದಾರೆ. 
ಕಂಪ್ಯೂಟರ್ ನೆಟ್ ವರ್ಕಿಂಗ್ ಕಂಪನಿ ಅರಿಸ್ಟಾ ನೆಟವರ್ಕ್ಸ್ ಅಧ್ಯಕ್ಷೆ ಹಾಗೂ ಸಿಇಒ ಜಯಶ್ರೀ ಉಲ್ಲಾಳ್,  ಸಿಂಟೆಲ್ ಕಂಪನಿ ಸಹ ಸಂಸ್ಥಾಪಕಿ ನೀರಾಜ್ ಸೇಥಿ ಹಾಗೂ ಸ್ಟ್ರೀಮಿಂಗ್ ಡಾಟಾ ಟೆಕ್ನಾಲಜಿ ಕಂಪನಿ ಸಹ ಸಂಸ್ಥಾಪಕಿ ನೇಹಾ ನಾರ್ಕೆಡೆ ಪೋರ್ಬ್ಸ್  ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 
ಅತಿ ದೊಡ್ಡ ಸಗಟು ವಿತರಣಾ ಕಂಪನಿ ಎಬಿಸಿ ಪೂರೈಕೆ ಕಂಪನಿಯ ಮುಖ್ಯಸ್ಥೆ ಡಯೇನ್ ಹೆಂಡ್ರಿಕ್ಸ್ ಮೊದಲ ಸ್ಥಾನದಲ್ಲಿದ್ದಾರೆ.  72 ವರ್ಷದ ಇವರ  ಒಟ್ಟು ಆದಾಯ 7 ಬಿಲಿಯನ್ ಡಾಲರ್ ನಷ್ಟಿದೆ. 
ಜಯಶ್ರೀ ಉಲ್ಲಾಳ್  ನಿವ್ವಳ ಆದಾಯ 1.4 ಬಿಲಿಯನ್ ಡಾಲರ್ ನಷ್ಟಾಗಿದ್ದು,  18ನೇ ಸ್ಥಾನದಲ್ಲಿದ್ದಾರೆ. 58 ವರ್ಷದ ಇವರು  ಲಂಡನ್ ಜನಿಸಿ ಭಾರತದಲ್ಲಿ ಬೆಳದಿದ್ದರು. ಈಗ ಅಮೆರಿಕಾದ ಅತ್ಯಂತ  ಶ್ರೀಮಂತರ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ ಎಂದು ಪೋರ್ಬ್ಸ್ ಹೇಳಿದೆ. 
ಟ್ರಾಯ್ ನಲ್ಲಿ 1980ರಲ್ಲಿ ಪತಿ ಭಾರತ್ ದೇಸಾಯಿ ಜೊತೆಗೆ ಸೆಂಥಿಲ್ ಕಂಪನಿ ಸ್ಥಾಪಿಸಿದ  ನೀರಾಜ್ ಸೇಥಿ 23 ನೇ ಸ್ಥಾನದಲ್ಲಿದ್ದಾರೆ. ಅವರ ಪ್ರಸ್ತುತ ಆದಾಯದ ಮೌಲ್ಯ 1 ಬಿಲಿಯನ್ ಡಾಲರ್ ನಷ್ಟಿದೆ. 
360 ಮಿಲಿಯನ್ ಡಾಲರ್ ನಿವ್ವಳ ಆದಾಯದೊಂದಿಗೆ ನೇಹಾ ನಾರ್ಕೆಡೆ   60ನೇ ಸ್ಥಾನದಲ್ಲಿದ್ದಾರೆ. ಅವರ ಆಸ್ತಿಯ ಒಟ್ಟು ಮೌಲ್ಯ 2.5 ಬಿಲಿಯನ್ ಡಾಲರ್ ನಷ್ಟಾಗಿದೆ .
ಫೇಸ್ ಬುಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ 12, ರಿಯಾಲಿಟಿ ಟಿವಿ ಸ್ಟಾರ್ ಕೈಲೀ ಜೆನ್ನರ್ 23, ಫ್ಯಾಷನ್ ಡಿಸೈನರ್  ಟೋರಿ ಬರ್ಚ್ 29, ಪಾಪ್ ಸ್ಟಾರ್ ರಿಹಾನ (37) ಟೆನ್ನಿಸ್ ಸ್ಟಾರ್ ಸೆರೆನಾ ವಿಲಿಯಮ್ಸ್ 80 ನೇ ಸ್ಥಾನದಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com