ಐಟಿ ಸಂಕಷ್ಟ: ಕಾಗ್ನಿಜೆಂಟ್ ನಂತರ ಸಾವಿರಾರು ಉದ್ದೋಗ ಕಡಿತಕ್ಕೆ ಮುಂದಾದ ಇನ್ಫೋಸಿಸ್

ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅಮೆರಿಕ ಮೂಲದ ಕಾಗ್ನಿಜೆಂಟ್ ಕಂಪೆನಿ ನಂತರ ಈಗ ಬೆಂಗಳೂರು ಮೂಲದ ಪ್ರತಿಷ್ಠಿತ ಐಟಿ ಕಂಪನಿ...
ಇನ್ಫೋಸಿಸ್
ಇನ್ಫೋಸಿಸ್

ನವದೆಹಲಿ: ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅಮೆರಿಕ ಮೂಲದ ಕಾಗ್ನಿಜೆಂಟ್ ಕಂಪೆನಿ ನಂತರ ಈಗ ಬೆಂಗಳೂರು ಮೂಲದ ಪ್ರತಿಷ್ಠಿತ ಐಟಿ ಕಂಪನಿ ಇನ್ಫೋಸಿಸ್ ಸಹ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ.

ಇನ್ಫೋಸಿಸ್​ ಶೇ. 10 ರಷ್ಟು ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, ಸಂಸ್ಥೆಯ ಮಧ್ಯಮ ಹಾಗೂ ಉನ್ನತ ಹುದ್ದೆಯಲ್ಲಿರುವ ಸುಮಾರು 2,200 ಸಿಬ್ಬಂದಿಯನ್ನು ವಜಾಗೊಳಿಸಲು ಕಂಪನಿ ನಿರ್ಧರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇನ್ಫೋಸಿಸ್​ನ ಜಾಬ್​ ಲೆವೆಲ್​ 6 ಮತ್ತು ಜಾಬ್ ಲೆವೆಲ್ 7 ಹಾಗೂ ಜಾಬ್​ ಲೆವೆಲ್ 8ರ ಶ್ರೇಣಿಯಲ್ಲಿ ಒಟ್ಟು 30,092 ಉದ್ಯೋಗಿಗಳಿದ್ದಾರೆ. ಇವರಲ್ಲಿ ಜೆಲ್​ 6 ಹಾಗೂ ಸಿನಿಯರ್ ಮ್ಯಾನೇಜರ್ ಲೆವೆಲ್​ನ ಒಟ್ಟು 2,200 ಉದ್ಯೋಗಿಗಳನ್ನು ವಜಾ ಮಾಡಲು ಕಂಪನಿ ನಿರ್ಧರಿಸಿದೆ ಎಂದು ವರದಿಯಾಗಿದೆ.

ಅಸೋಸಿಯೇಟ್ ಉದ್ಯೋಗಿಗಳಲ್ಲಿ ಜೆಲ್​ 3 ಮತ್ತು ಅದಕ್ಕಿಂತ ಕೆಳಗಿನ ಹಂತದ ಹಾಗೂ ಜೆಎಲ್​ 4, ಜೆಎಲ್​ 5 ಹಂತದಲ್ಲಿ ಶೇ.2.5ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಲಾಗಿದೆ. ಈ ಶ್ರೇಣಿಗಳಲ್ಲಿ ಒಟ್ಟು 86,558 ಉದ್ಯೋಗಿಗಳಿದ್ದು, ಅಸೋಸಿಯೇಟ್ ಮತ್ತು ಮಧ್ಯಮ ಶ್ರೇಣಿಯಲ್ಲಿ ಒಟ್ಟು 1.1 ಲಕ್ಷ ಉದ್ಯೋಗಿಗಳಿದ್ದಾರೆ. ಇವರಲ್ಲಿ ಸುಮಾರು 4ರಿಂದ 10 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

ಹಿರಿಯ ಉದ್ಯೋಗಿಗಳ ಶ್ರೇಣಿಯಲ್ಲಿ ಶೇ.2.5ರಷ್ಟು ಉದ್ಯೋಗಿಗಳನ್ನು ಕಡಿತ ಮಾಡಲಿದ್ದು, ಸೀನಿಯರ್ ಎಕ್ಸಿಕ್ಯೂಟಿವ್ಸ್, ಸಹಾಯಕ ಉಪಾಧ್ಯಕ್ಷ, ಉಪಾಧ್ಯಕ್ಷ, ಹಿರಿಯ ಉಪಾಧ್ಯಕ್ಷ, ಕಾರ್ಯಕಾರಿ ಉಪಾಧ್ಯಕ್ಷ ಸೇರಿದಂತೆ ಹೀಗೆ 50 ಮಂದಿ ತಮ್ಮ ಹುದ್ದೆ ಕಳೆದುಕೊಳ್ಳಲಿದ್ದಾರೆ.

ಕಳೆದ ವಾರ ಅಮೆರಿಕ ಮೂಲದ ಕಾಗ್ನಿಜೆಂಟ್ ಕಂಪೆನಿ ವೆಚ್ಚ ಕಡಿತ ಯೋಜನೆ ಭಾಗವಾಗಿ 7000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ನಿರ್ಧಾರ ಪ್ರಕಟಿಸಿತ್ತು. ಇದು ಸಹ  ಮಧ್ಯಮ ವರ್ಗದ ಶ್ರೇಣಿಯ ಹುದ್ದೆಯಿಂದ ಉನ್ನತ ಶ್ರೇಣಿಯ ಹುದ್ದೆಯವರೆಗೂ ಉದ್ಯೋಗ ಕಡಿತ ಮಾಡಲಾಗುವುದು ಎಂದು ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com